ಜಿಲ್ಲಾ ಸುದ್ದಿ
ಮಣ್ಣು ಕುಸಿದು ಮೃತರಾದ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ವಿತರಣೆ

ಕಾರವಾರ : ಕಳೆದ ಎರಡು ತಿಂಗಳ ಹಿಂದೆ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಪಬೈಲ್ ಗ್ರಾಮದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಧರೆಯ ಮಣ್ಣು ಕುಸಿದು ಹೊಸಳ್ಳಿ ಗಾಂವಠಾಣದ ನಾಲ್ಕು ಜನ ಕಾರ್ಮಿಕರು ಮೃತಪಟ್ಟಿದ್ದರು.
ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ಮೃತರ ಮನೆಗೆ ಭೇಟಿ ನೀಡಿ, ಮೃತಪಟ್ಟ ನಾಲ್ವರ ಕುಟುಂಬಸ್ಥರಿಗೆ ತಲಾ 3 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ಅನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ವಿಜಯ ಮಿರಾಶಿ,ಶ್ರೀ ರಾಘವೇಂದ್ರ ಗೊಂದಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.




