ಜಿಲ್ಲಾ ಸುದ್ದಿ
ಕೊರೋನಾ ಪೀಡಿತರಿಗೆ ಮನರಂಜನೆ; ಹಾಡಿ ಕುಣಿದ ಅಧಿಕಾರಿಗಳ ತಂಡ

ಚಿಕ್ಕಮಗಳೂರು: ಕೊರೋನಾ ಪಾಸಿಟೀವ್ ಇದ್ದವರು ಚಿಕಿತ್ಸೆ ಪಡೆಯುತ್ತಿರುವ ನಗರದ ಮೊರಾರ್ಜಿ ವಸತಿ ನಿಲಯದ ಆರೈಕೆ ಕೇಂದ್ರದಲ್ಲಿ ಮನರಂಜನೆಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಂದಾಯ ಉಪವಿಭಾಗಾಧಿಕಾರಿ ನಾಗರಾಜ್ ಅವರೊಂದಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹಾಡಿ ಕುಣಿದು, ಇಲ್ಲಿರುವ ಕೊರೋನಾ ಪೀಡಿತರಿಗೆ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು. ದೈಹಿಕ ಆರೋಗ್ಯ ಕಾಪಾಡುವುದರೊಂದಿಗೆ, ಮಾನಸಿಕವಾಗಿ ಧೈರ್ಯ ಹೊಂದಿರಬೇಕು. ಆಗ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂದು ತಿಳಿಹೇಳಿದರು.
ತಹಸೀಲ್ದಾರ್ ಕಾಂತರಾಜ್, ಜಿಲ್ಲಾ ಕಾರಾಗೃಹ ಅಧಿಕಾರಿ ರಾಕೇಶ್ ಕಾಂಬ್ಳೆ, ಸಮಾಜ ಕಲ್ಯಾಣಾಧಿಕಾರಿ ಎಚ್.ಡಿ.ರೇವಣ್ಣ, ಪತ್ರಕರ್ತ ಪಿ.ರಾಜೇಶ್ ಇದ್ದರು.




