ಜಿಲ್ಲಾ ಸುದ್ದಿ

ಬಾವಿಗೆ ಬಿದ್ದ ಮಹಿಳೆ; ಅಗ್ನಿಶಾಮಕ ದಳದಿಂದ ರಕ್ಷಣೆ

ಕಾರವಾರ : ಬಾವಿಗೆ ಬಿದ್ದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಗರದ ಉದ್ಯಮನಗರ ಎಂಬಲ್ಲಿ ನಡೆದಿದೆ.

ಸುನಂದ ಪಟಗಾರ (34) ಎಂಬ ಮಹಿಳೆಯೇ ರಕ್ಷಣೆಗೊಳಗಾದವಳಾಗಿದ್ದಾಳೆ. ಮನೆಯಿಂದ ಹೊರಬಂದ ಮಹಿಳೆ ಏಕಾಏಕಿ ಸಾರ್ವಜನಿಕ ಬಾವಿಗೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಅದೃಷ್ಟವಶಾತ್ ಬಾವಿ ಆಳವಿಲ್ಲದೇ ಇದ್ದಿದ್ದರಿಂದ ಆಕೆ ಬದುಕುಳಿದಿದ್ದಾಳೆ. ಸುಮಾರು ಎರಡು ತಾಸಿಗೂ ಹೆಚ್ವು ಕಾಲ ಬಾವಿಯಲ್ಲೇ ಚೀರಾಡಿದ್ದಾಳೆ. ಈ ವೇಳೆ ಮನೆಯಲ್ಲಿ ಈಕೆ ಇರದೇ ಇರುವುದನ್ನು ಗಮನಿಸಿ ಹೊರಬಂದು ನೋಡಿದಾಗ, ಈಕೆ ಚೀರಾಡುವ ಧ್ವನಿ ಮನೆಯ ಜನರಿಗೆ ಕೇಳಿಸಿದೆ.ತಕ್ಷಣ ಬಾವಿ ಇಣುಕಿ ನೋಡಿದಾಗ ಈಕೆ ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ,ತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಭೀಮರಾವ್ ವಾಯು ಉಪ್ಪಾರ್, ಸಿಬ್ಬಂದಿಗಳಾದ ಹನುಮಂತ ನಾಯ್ಕ ,ಉಲ್ಲಾಸ್ ವೈ ನಾಗೇಕರ್,ನಾಗೇಶ್ ದೇವಾಡಿಗ,ಪ್ರಶಾಂತ್ ಬಾರ್ಕಿ, ಲಗುಮಣ್ಣ ಎಂಬುವವರು ಭಾಗವಹಿಸಿ ರಕ್ಷಣೆ ಮಾಡಿದ್ದಾರೆ. ಘಟನೆ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button