ಮೈಸೂರು
ಕಚೇರಿಯಲ್ಲಿ ಕುಸಿದುಬಿದ್ದಿದ್ದ ಪಿಡಿಓ ಆಸ್ಪತ್ರೆಯಲ್ಲಿ ಸಾವು

ಮೈಸೂರು: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುಸಿದುಬಿದ್ದ ಮಹಿಳಾ ಪಿಡಿಓ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಘಟನೆ ನಡೆದಿದೆ. ಪಿಡಿಓ ಸಾವಿತ್ರಮ್ಮ(44) ಸಾವನ್ನಪ್ಪಿದ ದುರ್ದೈವಿ. ಸೆಪ್ಟೆಂಬರ್ 13ರಂದು ಸುತ್ತೂರು ಗ್ರಾಪಂ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಂಜನಗೂಡಿನ ಹುಲ್ಲಹಳ್ಳಿ ಮತ್ತು ಸುತ್ತೂರು ಗ್ರಾಮಗಳಲ್ಲಿ 6 ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಸಾವಿತ್ರಮ್ಮ ಕಾರ್ಯನಿರ್ವಹಿಸುತ್ತಿದ್ದರು. ಸುತ್ತೂರು ಗ್ರಾಪಂನಲ್ಲಿ ಜನಪ್ರತಿನಿಧಿಯೊಬ್ಬರು ಸಾವಿತ್ರಮ್ಮಗೆ ಧಮ್ಕಿ ಹಾಕಿದಾಗ ಕುಸಿದು ಬಿದ್ದಿದ್ದಾರೆಂದು ಹೇಳಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.




