ಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

Jagadish Shettar: ಸಿದ್ದರಾಯ್ಯನವರು ಕೀಳು ಮಟ್ಟದ ಟೀಕೆಯಿಂದ ಬಹಳ ದೊಡ್ಡವರಾಗಲ್ಲ: ಜಗದೀಶ್ ಶೆಟ್ಟರ್​​

ಧಾರವಾಡ: ಇತ್ತೀಚೆಗೆ ಸಿದ್ದರಾಮಯ್ಯನವರು ದೇಶ ಹಾಗೂ ರಾಜ್ಯ ತಾಲಿಬಾನ್​​ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಒಬ್ಬರು ಮಾಜಿ ಸಿಎಂ ಆಗಿ, ಐದು ವರ್ಷ ಆಡಳಿತ ನಡೆಸಿದವರ ಬಾಯಲ್ಲಿ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಕೀಳು ಮಟ್ಟದ ಟೀಕೆಯಿಂದ ಬಹಳ ದೊಡ್ಡವರೇನೂ ಆಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೇಟ್ಟರ್​ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈಗ ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಇವರೇ ಐದು ವರ್ಷ ಸಿಎಂ ಆಗಿದ್ದರು, ಆವಾಗ್ಲೇ ಇವರು ಅದನ್ನು ಬಹಿರಂಗ ಮಾಡಬಹುದಿತ್ತು.‌ ಆದರೆ ಈಗ ತಮ್ಮ ಅಧಿಕಾರವಧಿಯಲ್ಲಿ ಮಾಡಲಾಗದೇ, ಆ ಜವಾಬ್ದಾರಿ ಮತ್ತೊಬ್ಬರ ಮೇಲೆ ಹಾಕಿತ್ತಾ ಬರುತ್ತಿದ್ದಾರೆ. ಈ ಕುರಿತು ಸಿದ್ದರಾಮಯ್ಯನವರು ಸದನದಲ್ಲಿ ಧ್ವನಿ ಎತ್ತುವವರಿದ್ದರು, ಆದರೆ ಕಾಂಗ್ರೆಸ್ ನಾಯಕರೇ ಅವರನ್ನು ತಡೆ ಹಿಡಿದಿದ್ದಾರೆ. ಅಂದು ಅವರು ಧ್ವನಿ ಎತ್ತಿದ್ದರೆ ಅಂದೇ ಎಲ್ಲವನ್ನು ಬಹಿರಂಗ ಮಾಡುತ್ತಿದೆ ಆದರೆ ಈಗಲೂ ಅದನ್ನು ಬೀಡುವುದಿಲ್ಲ ಎಂದರು.

ಸಿದ್ದರಾಮಯ್ಯನವರು ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ, ಇವರ ತಾಲಿಬಾನಿ ಹೇಳಿಕೆ ಅವರಿಗೆ ಗೌರವ ತರುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ:

ಎರಡು ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಈಗಾಗಲೇ ಭಾರತೀಯ ಜನತಾ ಪಕ್ಷ ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದು, ಉಪಚುನಾವಣೆಯಲ್ಲಿ ಕೂಡ ಗೆಲುವು ನಿಶ್ಚಿತ ಎಂದರು.

ಉಪ ಚುನಾವಣೆಗೆ ನಾವು ಯಾವಾಗಿನಿಂದಲೂ ಸಿದ್ಧತೆಯೇ ಮಾಡಿಕೊಂಡು ಬರುತ್ತಿದ್ದೇವೆ. ಕಳೆದ ದಾವಣಗೇರಿ ಕೋರ್ ಕಮೀಟಿಯಲ್ಲಿಯೂ ಕೂಡ ಇದರ ಬಗ್ಗೆ ಚರ್ಚೆಯಾಗಿದೆ. ಇದುವರೆಗೂ ಅಭ್ಯರ್ಥಿ ಪೈನಲ್ ಆಗಿಲ್ಲ. ದಾವಣಗೆರೆಯಲ್ಲಿಯೂ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿಲ್ಲ. ಚುನಾವಣೆ ದಿನಾಂಕ ನಿಗದಿಯ ಬಳಿಕ ಅಭ್ಯರ್ಥಿ ಫೈನಲ್ ಬಗ್ಗೆ ತೀರ್ಮಾಣ ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಈಗ ದಿನಾಂಕ ಘೋಷಣೆಯಾಗಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಕರೆದು, ಅಭ್ಯರ್ಥಿಗಳ ಕುರಿತು ಫೈನಲ್ ಮಾಡಲಾಗುವುದು ಎಂದು ತಿಳಿಸಿದರು.

ಇದೇವೇಳೇ ಸಿಎಂ ಬಸವರಾಜ ಬೊಮ್ಮಾಯಿಯವರ ಸಾಮೂಹಿಕ ನಾಯಕತ್ವದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗಳನ್ನು ಎದುರುಸುತ್ತಾ ಬಂದಿದೆ. ಬಿಜೆಪಿ ಎಂದಿಗೂ ಒಬ್ಬರು ನಾಯಕತ್ವ ಇಟ್ಟುಕೊಂಡು ಚುನಾವಣೆ ಮಾಡಿಲ್ಲ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ನಮ್ಮ ಒಪ್ಪಿಗೆ ಇದೆ. ಶೆಟ್ಟರ್ ಅವರು ಸಿಎಂ ಅವರಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎಂಬುವುದು ಮಾಧ್ಯಮದ ಸೃಷ್ಟಿ. ಅದಕ್ಕೆ ಹೆಚ್ಚು ಒತ್ತುಕೊಡುವ ಅವಶ್ಯಕತೆ ಇಲ್ಲ.‌ ಮೊನ್ನೆ ನಾನು ಅವರು ಬೆಳಗಾವಿಯಲ್ಲಿ ಒಂದೇ ವೇದಿಕೆಯಲ್ಲಿ ಇದ್ದೇವು. ಆದರೆ ನಿನ್ನೆ ಬೇರೆ ಕಾರ್ಯದ‌ ನಿಮಿತ್ತವಾಗಿ ಕಾರ್ಯಕ್ರಮಕ್ಕೆ ಹೋಗಿಲ್ಲ. ಇದರ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button