Breaking NewsLatestರಾಜಕೀಯರಾಷ್ಟ್ರೀಯ
ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಕಾಂಗ್ರೆಸ್ಗೆ

ನವದೆಹಲಿ: ಮಾಜಿ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಮತ್ತು ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಮಂಗಳವಾರ ಕಾಂಗ್ರೆಸ್ ಸೇರಿದರು. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ದಮ್ಮುಖದಲ್ಲಿ ಈ ಇಬ್ಬರೂ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಯಾದರು.
ಕನ್ನಯ್ಯ ಕುಮಾರ್ ಈ ಮೊದಲು ಸಿಪಿಐನಲ್ಲಿದ್ದರು. 2019ರ ಮಹಾ ಚುನಾವಣೆಗೆ ಮೊದಲು ಅವರು ಸಿಪಿಐ ಸೇರಿದ್ದರು. ಬಳಿಕ ಅವರು ತಮ್ಮ ತವರುನೆಲವಾದ ಬಿಹಾರ್ನ ಬಗುಸರಾಯ್ನಿಂದ ಸ್ಪರ್ಧಿಸಿದರೂ, ಬಿಜೆಪಿಯ ಗಿರಿರಾಜ್ ಇಸಂಗ್ ವಿರುದ್ಧ ಸೋತರು.
ಇನ್ನು ಗುಜರಾತ್ನ ವಡ್ಗಾಮ್ ಕ್ಷೇತ್ರದ ಶಾಸಕರಾಗಿರುವ ಮೆವಾನಿ ಕಾಂಗ್ರೆಸ್ ಸೇರ್ಪಡೆ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
