Latestಜಿಲ್ಲಾ ಸುದ್ದಿಬಾಗಲಕೋಟೆರಾಜಕೀಯ

ಬಿಜೆಪಿಯವರು ತಾಲಿಬಾನ್ ಸಂ‌ಸ್ಕೃತಿಯವರು: ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿದ್ದರಾಮಯ್ಯ

ಬಾಗಲಕೋಟೆ: ಆರ್ ಎಸ್ ಎಸ್ ತಾಲಿಬಾನ್ ಸಂಸ್ಕೃತಿಯವರೆಂದು ಬಾದಾಮಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರಿಗೆ ನಂಬಿಕೆ ಇಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ಯಾರಿಗೆ ನಂಬಿಕೆ ಇಲ್ಲ. ಅವರೆಲ್ಲ ತಾಲಿಬಾನಿಗಳು. ಮನುಷ್ಯತ್ವ ಇಲ್ಲದೆ ಇರುವವರು,ರಾಕ್ಷಸಿ ಪ್ರವೃತ್ತಿ ಇರತಕ್ಕಂತವರು ಅವರೆಲ್ಲ ತಾಲಿಬಾನಿಗಳು. ಅದಕ್ಕೆ ಅವರಿಗೆ ತಾಲಿಬಾನಿಗಳು ಅಂತ ಕರೆದಿರುವುದು. ಆರ್ ಎಸ್ ಎಸ್ ನವರು ರಾಕ್ಷಸಿ ಪ್ರವೃತ್ತಿ, ಮನುಷ್ಯತ್ವ ಇಲ್ಲದಿರುವವರು ಎಂದರು.

ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ ಅವರಿಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇದಿಯಾ ? ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದು, ಅದರ ಪ್ರಕಾರ ಆಡಳಿತ ನಡೆಸಿ ಅಂತೇಳಿ. ಆದ್ರೆ ಬಿಜೆಪಿಯವರು ಆ ಪ್ರಕಾರ ನಡೆಸುವದಿಲ್ಲ ಅದಕ್ಕೆ ಅವರಿಗೆ ತಾಲಿಬಾನಿಗಳು, ಹಿಟ್ಲರ್ ವಂಶಸ್ಥರು ಅಂತ ನಾನು ಕರೆಯೋದು ಎಂದು ತಿಳಿಸಿದರು.

ಆರ್ ಎಸ್ ಎಸ್ ಇರದೇ ಇದ್ದಿದ್ರೆ ಇವರೆಲ್ಲ ನೇತಾಡ್ತಿದ್ರು ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾತಂತ್ರ್ಯ ಆರ್ ಎಸ್ ಎಸ್ ನಿಂದ ಬಂದಿದಿಯಾ?ಸ್ವಾತಂತ್ರ್ಯ ಬಂದಿದ್ದು ಯಾರಿಂದ? ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆರ್ ಎಸ್ಎಸ್‌ನಿಂದ? ಅಥವಾ ಗೋಳ್ವಾಕರ್ ಅವರಿಂದಾನಾ? ಮಹಾತ್ಮಾ ಗಾಂಧೀಜಿ, ಗೋಖಲೆ, ತಿಲಕ್, ಲಾಲಾ ಲಜಪತ್ ರಾಯ್, ನೆಹರೂ ಅವರಿಂದ ಸಿಕ್ಕಿದ್ದು ಗೊತ್ತಾಯ್ತಾ. ಗೋಡ್ಸೆಯಿಂದ ಸ್ವಾತಂತ್ರ್ಯ ಈ ದೇಶಕ್ಕೆ ಬಂದಿದಿಯಾ? ಸಾವರ್ಕರ್ ಅವರಿಂದ ಸ್ವಾತಂತ್ರ್ಯ ಬಂದಿತ್ತಾ? ಇತಿಹಾಸ ಗೊತ್ತಿಲ್ಲ ಪಾಪ ಅವುಗಳಿಗೆ ಪ್ರಾಣ ಕಳೆದುಕೊಂಡವರು ಯಾರು? ಸ್ವಾತಂತ್ರ್ಯ ತಂದುಕೊಟ್ಟವ್ರು ಆರ್ ಎಸ್ಎಸ್? ಅವ್ರ ಪಾತ್ರವೇನು? ಯಾರಾದ್ರೂ ಒಬ್ರು ಸತ್ತಿದ್ದಾರಾ ದೇಶಗೋಸ್ಕರ ಸಿದ್ದರಾಮಯ್ಯ ಪ್ರಶ್ನಿಸಿದರು. ಮಹಾತ್ಮಾ ಗಾಂಧಿಜಿಯನ್ನು ದಕ್ಷಿಣ ಆಫ್ರಿಕಾದಿಂದ ಕರೆತಂದವ್ರು ಯಾರು? ಗಾಂಧೀಜಿಯವ್ರನ್ನು ಕರೆತಂದವರು ಗೋಖಲೆ ಅವರು ಆರ್ ಎಸ್ಎಸ್ ನವರು ಗಾಂದೀಜಿಯನ್ನು ಕರೆತಂದ್ರಾ?ದೇಶಭಕ್ತಿ ಅಂದ್ರೆ ಬಾಯಲ್ಲಿ ಹೇಳೋದಾ. ದೇಶಕ್ಕೋಸ್ಕರ ಪ್ರಾಣ, ಬಲಿದಾನ, ತ್ಯಾಗ ಮಾಡದವರು ದೇಶಭಕ್ತರು. ಸಿಟಿ ರವಿ ಅವರಿಂದ ದೇಶಭಕ್ತಿ ಪಾಠ ಕಲಿಬೇಕಾಗಿಲ್ಲ ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ವಿರುದ್ಧ ವೇ ಸಾಮೂಹಿಕವಾಗಿ ವಾಗ್ದಾಳಿ ವಿಚಾರಕ್ಕೆ ಯಾರಿಗೆ ಶಕ್ತಿಯಿದೆಯೋ ಅವರ ಮೇಲೆ ಯಾಕೆ ಅಟ್ಯಾಕ್ ಮಾಡ್ತಾರೆ, ವೀಕ್ ಆಗಿರೋವರ ಮೇಲೆ ಯಾರೂ ಅಟ್ಯಾಕ್ ಮಾಡೋದಿಲ್ಲ. ರಾಜಕೀಯವಾಗಿ ಯಾರಿಗೆ ಶಕ್ತಿಯಿದೆಯೋ ಅವರ ಮೇಲೆ ಅಟ್ಯಾಕ್ ಮಾಡೋದು. ಬಿಜೆಪಿಯವರು, ಜೆಡಿಎಸ್ ನವರು ನನ್ನ ಮೇಲೆ ಅಟ್ಯಾಕ್ ಮಾಡ್ತಾರೆ. ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ಅಹಿಂದ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಹಿಂದ ಅಲ್ಲ, ಹಿಂದುಳಿದ ಜಾತಿಗಳ ಒಕ್ಕೂಟದ ಸಮಾವೇಶ ಮಾಡುತ್ತಿದ್ದಾರೆ. ದಾವಣಗೆರೆ ಸಮಾವೇಶದಲ್ಲಿ ಯಾರು ಭಾಗವಹಿಸ್ತಾರೆ ಅಂತಾ ಗೊತ್ತಿಲ್ಲ. ಯಾರ್ಯಾರನ್ನ ಕರೆದಿದ್ದಾರೋ ಗೊತ್ತಿಲ್ಲ. ಅಹಿಂದ ಸಮಾವೇಶ ಅಲ್ಲರೀ, ಹಿಂದುಳಿದ ಜಾತಿಗಳ ಒಕ್ಕೂಟ‌ ಸಮಾವೇಶ ಅದು. ಅಹಿಂದಕ್ಕೂ ಹಿಂದುಳಿದ ಜಾತಿಗಳ ಒಕ್ಕೂಟಕ್ಕೂ ವ್ಯತ್ಯಾಸ ಇಲ್ವಾ ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button