Latestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಕಾಂಗ್ರೆಸ್ ಪಕ್ಷ ಗುಲಾಮಗಿರಿ ಪಕ್ಷ, ನಮ್ಮದೂ ದೇಶ ಭಕ್ತಿಯ ಪಕ್ಷವಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ನಮ್ಮ ಪಕ್ಷಯಾವಗಲ್ಲೂ ದೇಶ ಭಕ್ತಿಯನ್ನು ಹೊಂದಿರುವಂತಹ ಪಕ್ಷವಾಗಿದೆ. ಕಾಂಗ್ರೆಸ್ ಪಾರ್ಟಿ ಗುಲಾಮಗಿರಿ ಪಾರ್ಟಿಯಾಗಿದೆ. ಕಾಂಗ್ರೆಸ್​​ನವರಿಗೆ ದೇಶ ಭಕ್ತಿಯು ಕೂಡಾ ತಾಲಿಬಾನಿಗಳ ತರಹವೇ ಕಾಣುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಭಾರತ ದೇಶವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡ ಹೋಗುವುದಕ್ಕೆ ಕಾಂಗ್ರೆಸ್ ಅಂದು ಅವಕಾಶಗಳಿದ್ದರು ಕೂಡಾ ವಂಚಿತವಾಗಿತ್ತು. ಈಗ ನಮ್ಮ ಪ್ರಧಾನಿಗಳು ದಿಟ್ಟ ಹೆಜ್ಜೆ ಇಟ್ಟು ಹೊಸ ಶಿಕ್ಷಣ ನೀತಿ ತರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿಯವರು ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬಹುದಾಗಿತ್ತು. ಅದನ್ನು ಮಾಡುವಲ್ಲಿ ಕಾಂಗ್ರೆಸ್‌ನವರು ವಿಫಲರಾಗಿದ್ದಾರೆ. ಈಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣ ಕೇತ್ರದಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯ ಮೂಲಕ 21 ನೇ ಶತಮಾನದ ಜ್ಞಾನದ ಯುಗಕ್ಕೆ ನಮ್ಮ ಮಕ್ಕಳನ್ನು ಪ್ರಧಾನಿಗಳು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ಇದರಲ್ಲಿಯು ಕೂಡಾ ಕಾಂಗ್ರೆಸ್‌ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುತ್ತಿದ್ದಾರೆ. ಕಳೆದ ದಿನ ಸಿದ್ದರಾಮಯ್ಯವರ ಹೇಳಿಕೆ ನೋಡಿದರೆ, ಬಹಳ ಹತಾಶರಾಗಿದ್ದಾರೆ ಎಂಬುವುದು ತಿಳಿಯುತ್ತದೆ. ಒಬ್ಬರು ಮಾಜಿ ಸಿಎಂ ಆದವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ಹೋರಾಟಗಾರರು ಸಾಮನ್ಯ ಜನರಿಗೆ ತೊಂದರೆ ನೀಡಬಾರದು:

ಕೊರೊನಾ ಮಾಹಾಮಾರಿಯ ನಂತರ ಸಾರ್ವಜನಿಕರು ಈಗ ತಮ್ಮ ತಮ್ಮ ವೃತಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ಬಂದ್ ಮತ್ತೊಂದು ಮಗದೊಂದು ಮಾಡುವುದು ಸರಿಯಲ್ಲ. ಹೋರಾಟಗಾರರಿಗೆ ಈಗಾಗಲೇ ಹಲವು ಬಾರಿ ಮನವಿ ಕೂಡಾ ಮಾಡಿದ್ದೇನೆ. ಜನರಿಗೆ ತೊಂದರೆ ಆಗುವಂತಹ ಕಾರ್ಯಕ್ಕೆ ಹೋಗಬಾರದು. ಭಾರತ ಬಂದ್‌ಗಿಂತ ತಮ್ಮ ವೈಚಾರಿಕತೆಯನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸಬೇಕು. ಜನರಿಗೆ ತೊಂದರೆಯಾಗದಂತೆ ತಮ್ಮ ಹೋರಾಟಗಳನ್ನು ಮಾಡಬೇಕು‌ ಎಂದು ಮನವಿ ಮಾಡಿಕೊಂಡರು.

Spread the love

Related Articles

Leave a Reply

Your email address will not be published. Required fields are marked *

Back to top button