ಜಿಲ್ಲಾ ಸುದ್ದಿಬಾಗಲಕೋಟೆಮನರಂಜನೆಸಿನಿಮಾಸೆಲೆಬ್ರಿಟಿ

ಬ್ರಾಹ್ಮಣ ವಿಚಾರದಲ್ಲಿ ನಟ ಉಪೇಂದ್ರ ಬಗ್ಗೆ ಕುಟುಕಿದ ನಟ ಚೇತನ್!!

ಬಾಗಲಕೋಟೆ: ಬ್ರಾಹ್ಮಣ್ಯ ವಿಚಾರ ಇಟ್ಟುಕೊಂಡು ಮತ್ತೆ ಚಿತ್ರನಟ ಉಪೇಂದ್ರ ಬಗ್ಗೆ ಬಾಗಲಕೋಟೆಯಲ್ಲಿ ಸ್ಯಾಂಡಲ್ ವುಡ್ ನಟ ಚೇತನ್ ಕುಟುಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ವಿಚಾರಧಾರೆ ನನಗೆ ಸಂಪೂರ್ಣವಾಗಿ ಗೊತ್ತಿಲ್ಲ. ಅವರ ವಿಚಾರದ ಬಗ್ಗೆ ನಾವು ಒಂದು ಹೋರಾಟ ಕೂಡ ಮಾಡಿದ್ದೇವೆ.‌ ಬ್ರಾಹ್ಮಣ್ಯದ ಪರಿಕಲ್ಪನೆಯಲ್ಲಿ ನಮಗೂ ಉಪೇಂದ್ರ ಅವರಿಗೂ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿವೆ ಎಂದರು.

ಸಾಮಾಜಿಕ ಅಸಮಾನತೆ ಅನ್ನೋದನ್ನು ಅವರು ಎಷ್ಟರಮಟ್ಟಿಗೆ ಒಪ್ಪುತ್ತಾರೋ ಗೊತ್ತಿಲ್ಲ. ಅಸಮಾನತೆ ಇದೆಯೆಂದು ಕಾಣಿಸುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಅಸಮಾನತೆ ಶೋಷಣೆ ನಡೆಯತ್ತಲೇ ಇದೆ. ಇದಕ್ಕೆ ಬಾದಾಮಿ ದಯಾಭಾರತಿ ಮಾತಾಜಿ ಅವರ ಆಶ್ರಮ ಒಡೆದು ಹಾಕಿದ್ದೇ ಸಾಕ್ಷಿ ಎಂದರು.

ಉಪೇಂದ್ರ ಅವರು ಸಂವಿಧಾನದ ಅಡಿಯಲ್ಲಿ ಏನು ಮಾಡುತ್ತಾರೋ ಮಾಡಲಿ. ನಿಲ್ಲಿಸುವ ಪ್ರಶ್ನೆ ಬರೋದಿಲ್ಲ, ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ. ರಾಜಕೀಯಕ್ಕೆ ಸೇರಬೇಕೆಂಬ ಯಾವ ಉದ್ದೇಶ ನನಗೆ ಇಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button