ಚಿಪ್ಪುಹಂದಿ ಅಕ್ರಮ ಸಾಗಾಟ – ಅರೋಪಿಗಳು ಮಾಲು ಸಮೇತ ಪೊಲೀಸರ ವಶಕ್ಕೆ

ಕೊಡಗು : ಅಳಿವಿನ ಅಂಚಿನಲ್ಲಿರುವ ಚಿಪ್ಪು ಹಂದಿಯನ್ನು ಅಕ್ರಮವಾಗಿ ಓಮಿನಿ ವಾಹನದಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದಾಗ ಪೊಲಿಸರು ದಾಳಿ ಮಾಡಿ ಕಳ್ಳರನ್ನು ಬಂದಿಸಿದ್ದಾರೆ.
ಸೆಪ್ಟೆಂಬರ್ 24ರಂದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಿಂದ ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ನಗರದ ಕಡೆಗೆ ಬೆಳಗಿನ ಜಾವ 10 ಗಂಟೆಗೆ ಬಿಳಿ ಬಣ್ಣದ ಮಾರುತಿ ಓಮಿನಿಯಲ್ಲಿ ಮೂರು ಜನ ವ್ಯಕ್ತಿಗಳು ಒಂದು ಗೋಣಿಚೀಲದ ಒಳಗೆ ಅಳಿವಿನಂಚಿನಲ್ಲಿರುವ ಒಂದು ಪಂಗೋಲಿನ್ (ಚಿಪ್ಪು ಹಂದಿ) ಅನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುತ್ತಿರುವ ಕುರಿತು ಪೊಲಿಸರಿಗೆ ಮಾಹಿತಿ ಸಿಕ್ಕಿದೆ.
ಪೊಲಿಸರು ತಮಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಮೂರು ಆರೋಪಿಗಳನ್ನು ಮಾರುತಿ ಓಮಿನಿ ಕಾರು ಮತ್ತು ಒಂದು ಪಂಗೋಲಿನ್ (ಚಿಪ್ಪು ಹಂದಿ) ಸಮೇತ ಬಂಧಿಸಿ ಮಾಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ವಿರಾಜಪೇಟೆ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಾರ್ಯಚರಣೆಯಲ್ಲಿ ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾನಿರೀಕ್ಷಕರಾದ ಮಾನ್ಯ ಶ್ರೀ ಕೆ.ವಿ.ಶರತ್ ಚಂದ್ರ, IPS ರವರ ನಿರ್ದೇಶನದ ಮೇರೆಗೆ, ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಸುರೇಶ್ ಬಾಬುರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಅರಕ್ಷಕ ಉಪನಿರೀಕ್ಷಕರಾದ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ, ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ.ನ, ಎಸ್.ಎಂ ಯೋಗೇಶ್ ಭಾಗವಹಿಸಿದ್ದರು




