ಅಂತರ್ಜಲ ವೃದ್ದಿಗೆ ಕಲ್ಯಾಣಿಗಳ ಅಭಿವೃದ್ದಿ ಅತ್ಯಗತ್ಯ: ಮಾಜಿ ಶಾಸಕ ಮುನಿನರಸಿಂಹಯ್ಯ

ದೇವನಹಳ್ಳಿ : ಜಲ ಮೂಲಗಳು ತಾಲ್ಲೂಕಿನಲ್ಲಿ ಬತ್ತಿಹೊಗಿದ್ದು ಸರ್ಕಾರದ ಅನುಧಾನ ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ದಿಗೆ ಕಲ್ಯಾಣಿಗಳ ಅಭಿವೃದ್ದಿ ಒತ್ತು ನೀಡಬೇಕಿದೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ತಿಳಿಸಿದರು.
ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯ ದಿನ್ನೂರಿನಲ್ಲಿ ಕಲ್ಯಾಣಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಆದಾಯದ ಮೂಲಗಳಿಲ್ಲದಿದ್ದರು ನರೇಗಾ ಯೋಜನೆಯಲ್ಲಿ ಬಹಳ ಉತ್ಕೃಷ್ಟವಾಗಿ ಅಭಿವೃದ್ದಿ ಪಡಿಸಿದ್ದಾರೆ. ಕಾಮಗಾರಿ ಯಶಸ್ವಿಗೆ ಕೈ ಜೋಡಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ ದಿನ್ನೂರಿನ ಸರ್ಕಾರಿ ಪಡ ಇರುವ ಜಾಗ ಒತುವರಿಯಾಗಿತ್ತು ಇದು ಗ್ರಾಮದ ಅಭಿವೃದ್ದಿಗೆಂದು ಗ್ರಾಮಸ್ಥರಿಗೆ ಮನವರಿಕೆಯಾಗಿದ್ದು ಇದರ ಫಲವಾಗಿ ಕಲ್ಯಾಣಿ ನಿರ್ಮಿಸಲು ಸಾಧ್ಯವಾಗಿದೆ.
ನರೇಗಾದಲ್ಲಿ 25 ಲಕ್ಷ ರೂ ಧಾನಿಗಳ ದೇಣಿಗೆ 15 ಸೇರಿದಂತೆ ಸುಮಾರು 40 ಲಕ್ಷರೂ ವೆಚ್ಚದಲ್ಲಿ ಕಲ್ಯಾಣಿ ನಿರ್ಮಾಣಗೊಂಡು ಗ್ರಾಮಸ್ಥರಿಗೆ ಹಸ್ತಾಂತರಿಸಲಾಗಿದೆ, ಎಂದರು.




