ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡ: ಎಗ್ ರೈಸ್ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಧಾರವಾಡ: ಎಗ್ ರೈಸ್ ತಿನ್ನಿಸುವ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸುವಲ್ಲಿ, ಧಾರವಾಡದ ಪೊಲೀಸರು ಸಫಲರಾಗಿದ್ದಾರೆ. ಭಿಕ್ಷೆ ಬೇಡುತಿದ್ದ 13 ವರ್ಷದ ಬಾಲಕಿಗೆ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಬಂಧಿತ ಆರೋಪಿಯಾಗಿದ್ದಾನೆ. ಇನ್ನೂ ಭಿಕ್ಷೆ ಬೇಡುತಿದ್ದ ಬಾಲಕಿಯನ್ನು ಮಕ್ಕಳ‌ ರಕ್ಷಣಾ ಘಟಕದ ಸಿಂಬ್ಬಂದಿ ತಂದು‌ ವಿಚಾರ‌ಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ವಿಚಾರಣೆ ವೇಳೆ‌ ಅತ್ಯಾಚಾರ ನಡೆಸಿರುವ ಬಗ್ಗೆ ಮಾಹಿತಿ‌ ನೀಡಿದ್ದ ಬಾಲಕಿ, ಆರೋಪಿಗೆ ತೊರಿಸಿದರೆ ಗುರುತು ಹಿಡಿಯುವದಾಗಿ ತಿಳಿಸಿದ್ದಳು.‌ ಅದೇ‌‌ ರೀತಿ ಮಕ್ಕಳ‌ ರಕ್ಷಣಾ ಘಟಕದ ಅಧಿಕಾರಿ ಕಮಲಾ‌ ಉಪನಗರ ಠಾಣೆಯಲ್ಲಿ ದೂರನ್ನ ನೀಡಿದ್ದರು.‌

ದೂರು ಬಂದ ಆಧಾರದ ಮೇಲೆ ಆರೋಪಿ ಹುಡುಕಾಟ ನಡೆಸಿದ್ದ ಧಾರವಾಡ ಉಪನಗರ ಠಾಣೆ ಪೊಲೀಸರು, ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ತಳವಾರ ಎಂಬಾತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button