ಜಿಲ್ಲಾ ಸುದ್ದಿ
ಬೀದಿನಾಯಿಗಳ ಹಾವಳಿಗೆ ಬಲಿಯಾದ ಮಂಗ: ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಿಸಿದ ಗ್ರಾಮಸ್ಥರು

ಕಲಬುರಗಿ: ಬೀದಿನಾಯಿ ದಾಳಿಯಿಂದ ಸಾವನ್ನಪ್ಪಿದ ಮಂಗನನ್ನು ಗ್ರಾಮಸ್ಥರು ಸೇರಿಕೊಂಡು ಶಾಸ್ತ್ರೋಕ್ತವಾಗಿ ಅಂತ್ಯಕ್ರೀಯೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.
ಕಳೆದ ಹಲವು ದಿನಗಳಿಂದ ಗ್ರಾಮಸ್ಥರೊಂದಿಗೆ ಸಲುಗೆ ಪ್ರೀತಿಯಿಂದ ಇರುತ್ತಿದ್ದ ಮಂಗದ ಮೇಲೆ ಬೀದಿ ನಾಯಿಗಳ ದಾಳಿ ನಡೆಸಿವೆ. ಗಂಭೀರವಾಗಿ ರಕ್ತಗಾಯವಾದ ಮಂಗ ಅಸುನೀಗಿದೆ. ಆಂಜನೆಯನ ಸ್ವರೂಪಿ ಎಂದು ಹೇಳಲಾಗುವ ಮಂಗನ ಸಾವಿಗೆ ಇಡಿ ಗ್ರಾಮವೇ ಕಂಬನಿ ಮೀಡಿದಿದ್ದು ಇಡಿರಾತ್ರಿ ಭಜನೆ ಮಾಡಿದ್ದಾರೆ.
ಮಂಗನ ಶವಕ್ಕೆ ಮನುಷ್ಯರ ಶವದಂತೆ ಸ್ನಾನಮಾಡಿಸಿ, ಕುರ್ಚಿ ಮೇಲೆ ಕೂರಿಸಿ, ಪೇಟ ತೊಡಿಸಿ, ಹೂಮಾಲೆ ಹಾಕಿ ಸಾಂಪ್ರದಾಯದಂತೆ ಅತ್ಯಂತ ಶ್ರದ್ದಾ, ಭಕ್ತಿಯಿಂದ ಪೂಜೆ ನೇರವೇರಿಸಿದ್ದಾರೆ. ಸಾವಿರಾರು ಜನರಿಗೆ ಅನ್ನ ಸಮರ್ಪಣೆ ಮಾಡಿ ಶವಯಾತ್ರೆ ಕೂಡ ನಡೆಸಿ ನಂತರ ಅಂತ್ಯಕ್ರಿಯೆ ಮಾಡುವ ಮೂಲಕ ಅರಳಗುಂಡಗಿ ಗ್ರಾಮಸ್ಥರು ಮಾನವಿಯತೆಗೆ ಸಾಕ್ಷಿಯಾಗಿದ್ದಾರೆ.




