Youth Murder: ಯುವಕನ ಬರ್ಬರ ಹತ್ಯೆ: ನಾಯಿಯ ವಿಚಾರಕ್ಕೆ ನಡಿತಾ ಕೊಲೆ..?

ಕಲಬುರಗಿ: ನಾಯಿಯ ವಿಷಯಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತೆಗೈದ ಘಟನೆ ಹೈಕೋರ್ಟ್ ಬಳಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ನಡೆದಿದೆ.
ಗುರುರಾಜ್ ಕುಲಕರ್ಣಿ (35) ಕೊಲೆಯಾದ ಯುವಕ, ಗುರುರಾಜ್ ಕುಲಕರ್ಣಿ ಹಾಗೂ ಪಕ್ಕದ ಮನೆ ಪವನ್ ಜಾಗಿರ್ದಾರ್ ನಡುವೆ ನಾಯಿಯ ವಿಚಾರವಾಗಿ ಗಲಾಟೆ ನಡೆದಿತ್ತು. ಕೊಲೆಯಾದ ಗುರುರಾಜ್ ಅವರ ಮನೆ ನಾಯಿಗೆ ಪಕ್ಕದ ಮನೆಯ ಪವನ್ ಜಾಗಿರ್ದಾರ್ ಎಂಬಾತ ಕಲ್ಲು ಹೋಡೆಯುತ್ತಿದ್ದನಂತೆ, ಇದೇ ವಿಚಾರವಾಗಿ ಎರಡು ತಿಂಗಳ ಹಿಂದೆ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ.
ನಿನ್ನೆರಾತ್ರಿ ಪವನ್ ಹಾಗೂ ಆತನ ಸ್ನೇಹಿತರು ಗುರುರಾಜ್ನನ್ನು ಸಂಧಾನಕ್ಕೆಂದು ಕರೆಯಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗುರುರಾಜ್ ಮೇಲೆ ಪವನ್ ಜಾಗಿರ್ದಾರ್ ಹಾಗೂ ಸ್ನೇಹಿತರು ಸೇರಿ ಹತ್ಯೆಗೈದ ಹಿನ್ನಲೆ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕೊಲೆಗೆ ಮತ್ತೊಂದು ಕಾರಣ ಕೂಡಾ ಕೇಳಿ ಬರುತ್ತಿದೆ. ಯುವತಿಯೊಬ್ಬಳ ವಿಷಯವಾಗಿ ಕಲಹ ನಡೆದು ಕೊಲೆ ಆಗಿದೆ ಎನ್ನಲಾಗುತ್ತಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸ್ರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ತನಿಖೆ ನಂತರವಷ್ಟೆ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ.




