
ಬೆಂಗಳೂರು: ವಿಧಾನಮಂಡಲದಲ್ಲಿ ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಹೇಳೋದನ್ನೇ ಕೇಳೋದಾದರೆ ಆ ಸ್ಪೀಕರ್ ಸ್ಥಾನ ಯಾಕಿರಬೇಕು? ಯಾರಾದರೂ ಶಾಸಕರೋ, ಮಂತ್ರಿಯೋ ಆ ಕುರ್ಚಿಯಲ್ಲಿ ಕೂರಬಹುದಲ್ವಾ? ಎಂದು ಹರಿಹಾಯ್ದಿದ್ದಾರೆ.
ಸ್ಪೀಕರ್ ಆದವರು ಪಕ್ಷಾತೀತವಾಗಿರಬೇಕು. ಆದರೆ ಇವರು ಮಾಡುತ್ತಿರುವುದೇನು? ಸರ್ಕಾರದ ಕಲಾಪಗಳನ್ನು ಮುಗಿಸಿಕೊಂಡರು. ಬಿಲ್ಗಳನ್ನು ಪಾಸ್ ಮಾಡಿಕೊಂಡರು. ತಮಗೆ ಬೇಕಾದಂತೆ ಮಾಡಿಕೊಂಡರು. ಜನರ ಸಮಸ್ಯೆಗಳನ್ನು ಮಾತ್ರ ಚರ್ಚೆಗೊಳಪಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬೊಮ್ಮಾಯಿ ಆರ್ಎಸ್ಎಸ್ ಕೈಗೊಂಬೆ:
ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲೆ ನಾನು ನಿರೀಕ್ಷೆ ಇಟ್ಟಿದ್ದೆ. ಇವರಿಗೆ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಬಹುದೆಂದು ಅಂದುಕೊಂಡಿದ್ದೆ. ಆದರೆ ಅವರಿಗೆ ಪ್ರಜಾಪ್ರಭುತ್ವದಲ್ಲೂ ನಂಬಿಕೆಯಿಲ್ಲ. ಸಂಸದೀಯ ವ್ಯವಸ್ಥೆಯಲ್ಲೂ ನಂಬಿಕೆಯಿಲ್ಲ. ಆರ್ಎಸ್ಎಸ್ನ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಮುಖವಾಡವಷ್ಟೇ ಇವರದ್ದು. ಈ ಸರ್ಕಾರಕ್ಕೆ ನಿರ್ದೇಶಕ ಆರ್ಎಸ್ಎಸ್ ಆಗಿದೆ. ಅವರ ಕೈಗೊಂಬೆಗಳಾಗಿ ಇವರೆಲ್ಲಾ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.



