Breaking NewsLatestರಾಜಕೀಯರಾಷ್ಟ್ರೀಯ

ಎಲ್ಲ ಫೋಟೋಗಳ ನಕಲು ಕಷ್ಟ: ಮೋದಿ ಟ್ವೀಟ್​ಗೆ ಕಾಂಗ್ರೆಸ್ ಉತ್ತರ; ಮನಮೋಹನ್ ಸಿಂಗ್ ಫೋಟೋ ಪೋಸ್ಟ್

ನವದೆಹಲಿ: ಪ್ರಧಾನಿ ಮೋದಿ ಅಮೆರಿಕಾಕ್ಕೆ ತೆರಳುವ ವೇಳೆಯಲ್ಲಿ ಏರ್ ಇಂಡಿಯಾ ಒನ್ ವಿಮಾನದಿಂದ, ದೀರ್ಘ ಪ್ರಯಾಣದ ವೇಳೆಯಲ್ಲಿನ ಕೆಲಸ ಕುರಿತ ಫೋಟೊವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ ಹಲವು ಗಂಟೆಗಳ ಬಳಿಕ ಕಾಂಗ್ರೆಸ್ ಪಕ್ಷ ಅದಕ್ಕೆ ಪ್ರತಿಯಾಗಿ ಮನಮೋಹನ್ ಸಿಂಗ್ ಅವರ ಚಿತ್ರಗಳನ್ನು ಪೋಸ್ಟ್ ಮಾಡಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಮಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಚಿತ್ರವನ್ನು ಶೇರ್ ಮಾಡಿರುವ ಕಾಂಗ್ರೆಸ್, ಕೆಲವು ಫೋಟೋಗಳನ್ನು ನಕಲು ಮಾಡುವುದು ಕಷ್ಟ ಎಂದು ಬರೆದಿದೆ.

ದೀರ್ಘ ಅವಧಿಯ ಪ್ರಯಾಣವೆಂದರೆ ಕಡತಗಳ ಕೆಲಸ ಎಂಬ ವಿವರಣೆಯೊಂದಿಗೆ ಮೋದಿ ವಾಷಿಂಗ್ಟನ್​ಗೆ ಪ್ರಯಾಣಿಸುತ್ತಿದ್ದ ವಿಮಾನದಿಂದ ಫೋಟೊ ಶೇರ್ ಮಾಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button