ಜಿಲ್ಲಾ ಸುದ್ದಿ

ಕೋವಿಡ್ ವಾರಿಯರ್ಸ್​ಗೆ ಆಹಾರ ಕಿಟ್ ವಿತರಣೆ

ಮಡಿಕೇರಿ: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಶುಕ್ರವಾರ ನಗರದ ಪತ್ರಕರ್ತರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು.

ಕೊಡಗು ಜಿಪಂ ಸಭಾಂಗಣದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಅಧಿಕ ಪತ್ರಕರ್ತರು, ಕಿಟ್​ಗಳನ್ನು ಪಡೆದುಕೊಂಡರು.

ಅಸ್ಪತ್ರೆಗಳಿಗೆ ಭೇಟಿ ನೀಡಿ. ಪ್ರತೀ ರೋಗಿಗಳೊಂದಿಗೆ ತಲಾ ಒಂದು ನಿಮಿಷ ಮಾತನಾಡಿ, ಅವರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಅದೇ ರೀತಿ ಗ್ರಾ.ಪಂ.ಗಳಿಗೂ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ, ಮಾರ್ಗದರ್ಶನ ಮಾಡಿದ್ದೇನೆ ಎಂದು ರಂಜನ್ ಹೇಳಿದರು.

ಕೊಡಗಿನಲ್ಲಿ ಕಳೆದ ಬಾರಿಗಿಂತ ಈ ವರ್ಷ ಸಾವಿನ ಸಂಖ್ಯೆ ಹೆಚ್ಚಿದೆ. ಮೂರನೆ ಅಲೆಯನ್ನು ಎದುರಿಸುವ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ. ಜನರ ಸಹಕಾರವಿದ್ದರೆ, ಕೊರೋನಾ ನಿಯಂತ್ರಣ ಸಾಧ್ಯ ಎಂದು ರಂಜನ್ ಹೇಳಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ, ಜಿಪಂ ಮಾಜಿ ಅಧ್ಯಕ್ಷ ವಿ ಎಂ ವಿಜಯ್, ಹಿರಿಯ ಪತ್ರಕರ್ತ ಅನಿಲ್ ಹೆಚ್ ಟಿ ಮತ್ತಿತರರು ಹಾಜರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button