ಮನರಂಜನೆಸಿನಿಮಾಸೆಲೆಬ್ರಿಟಿ
Payal Ghosh: ಮುಂಬೈನಲ್ಲಿ ಶಂಕಿತರ ಆ್ಯಸಿಡ್ ದಾಳಿಗೆ ಒಳಗಾದ ನಟಿ ಪಾಯಲ್ ಘೋಷ್

ನಟಿ ಮತ್ತು ರಾಜಕಾರಣಿ ಪಾಯಲ್ ಘೋಷ್ ಅವರು ಮುಂಬೈ ನಲ್ಲಿ ಔಷಧಿಗಳನ್ನು ಖರೀದಿಸಿ ಮನೆಗೆ ಮರಳುತ್ತಿದ್ದಾಗ ಕೆಲವು ಮುಖವಾಡ ಧರಿಸಿದ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದಾರೆ.
ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವು ಪುರುಷರು ತನ್ನ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದರು. ಅವರ ಕೈಯಲ್ಲಿ ಒಂದು ಬಾಟಲಿ ಇದ್ದು, ಅದನ್ನು ನಟಿ ಆ್ಯಸಿಡ್ ಎಂಬುದಾಗಿ ಶಂಕಿಸಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವಾಗ ನಟಿಗೆ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.
ನಟಿ ಪಾಯಲ್ ಘೋಷ್ ಅವರು 2020ರಲ್ಲಿ ರಾಮದಾಸ್ ಅಠವಾಲೆ ಅವರ ಪಕ್ಷಕ್ಕೆ ಸೇರಿದ್ದರು. ತಮ್ಮ ಮೇಲೆ ದಾಳಿ ನಡೆದ ಬಗ್ಗೆ ನಟಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ನಟಿ ಎಫ್ ಐಆರ್ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.




