ಮನರಂಜನೆಸಿನಿಮಾಸೆಲೆಬ್ರಿಟಿ

ನಟ ಸೋನಿ ಸೂದ್ ಮೇಲೆ ತೆರಿಗೆ ವಂಚನೆ ಆರೋಪ ಮಾಡಿದ ಐಟಿ ಇಲಾಖೆ

ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕ ನಿರ್ಗತಿಕರ ಸಹಾಯಕ್ಕೆ ನಿಂತ ಬಾಲಿವುಡ್ ನಟ ಸೋನು ಸೂದ್ ಅವರ ಸ್ಥಳಗಳ ಮೇಲೆ ಇತ್ತೀಚೆಗೆ ಐಟಿ ಇಲಾಖೆ ದಾಳಿ ನಡೆಸಿದೆ.

ಐಟಿ ಇಲಾಖೆ ಸೋನು ಸೂದ್ ಅವರಿಗೆ ಸಂಬಂಧಿಸಿದ ಮುಂಬೈನ ಹಲವಾರು ಸ್ಥಳಗಳಲ್ಲಿ ಶೋಧ ಕಾರ್ಯಗಳನ್ನು ನಡೆಸಿತು. ಅಲ್ಲದೇ ಮುಂಬೈ ಸೇರಿದಂತೆ ಲಕ್ನೊ, ಕಾನ್ಪುರ, ಜೈಪುರ, ದೆಹಲಿ ಮತ್ತು ಗುರ್ಗಾಂವ್ ನಲ್ಲಿ ಒಟ್ಟು 28 ಆವರಣಗಳನ್ನು ಶೋಧ ಕಾರ್ಯಾಚರಣೆ ನಡೆಸಿತ್ತು.

ಆ ಸಮಯದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಒಟ್ಟು ತೆರಿಗೆ ವಂಚನೆಯ ಮೊತ್ತವು 20 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ಐಟಿ ಇಲಾಖೆ ತಿಳಿಸಿದೆ ಎನ್ನಲಾಗಿದೆ. ಅಲ್ಲದೇ ಶೋಧ ಸಮಯದಲ್ಲಿ ರೂ.1.8 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. 11 ಲಾಕರ್ ಗಳನ್ನು ನಿಷೇಧಿತ ಆದೇಶದಡಿಯಲ್ಲಿ ಇರಿಸಲಾಗಿದೆ. ಹಾಗೇ ಶೋಧ ಕಾರ್ಯ ಇನ್ನೂ ಮುಂದುವರಿಯಲಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂಬುದಾಗಿ ತಿಳಿದುಬಂದಿದೆ

Spread the love

Related Articles

Leave a Reply

Your email address will not be published. Required fields are marked *

Back to top button