ಉಡುಪಿ
ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ನಿಂತು ರಸ್ತೆ ತಡೆ

ಉಡುಪಿ: ಪರ್ಕಳ, ಇಲ್ಲಿನ ಬಾಬುರಾಯ ಸರ್ಕಲ್ ಮುಂದೆ, ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ವಾಹನ ಚಾಲಕರಿಗೆ ತೊಂದರೆಯಾಗುವುದರ ಜೊತೆಗೆ ಭೂ ಸಂತ್ರಸ್ತರಿಗೆ ಕಳೆದ ನಾಲ್ಕು ತಿಂಗಳಿಂದ ಹಣ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿರುವ ಜಿಲ್ಲಾಡಳಿತ, ಮತ್ತು ಬಿಜೆಪಿ ಸರಕಾರದ ಜನನಾಯಕರ ವಿಭಿನ್ನ ಹೇಳಿಕೆಯ ಬೇಸತ್ತು ಅವರ ವಿರುದ್ಧ, ಘೋಷಣೆ ಕೂಗಿ, ರಾಷ್ಟ್ರೀಯ ಹೆದ್ದಾರಿ ತಡೆನಡೆಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಉಡುಪಿ ಬ್ಲಾಕ್ ಕಾಂಗ್ರೆಸ್ ನ ರಮೇಶ್ ಕಾಂಚನ್ ಮಾತನಾಡುತ್ತಾ, ಭೂ ಸಂತ್ರಸ್ತರಿಗೆ ಹಣ ಶೀಘ್ರ ಬಿಡುಗಡೆ ಮಾಡಬೇಕು, ನೂತನ ರಸ್ತೆ ಕಾಮಗಾರಿ ಪೂರ್ಣಗೊಳಿಸ ಬೇಕು ಎಂದು ಪ್ರತಿಭಟನೆಯಲ್ಲಿ ಸರಕಾರವನ್ನುಒತ್ತಾಯಿಸಿದರು.




