Breaking NewsLatestರಾಷ್ಟ್ರೀಯಸುದ್ದಿ

ಆರೋಪಿಗಳನ್ನು ಬೇಕಾಬಿಟ್ಟಿಯಾಗಿ ನ್ಯಾಯಾಲಯಕ್ಕೆ ಕರೆಸುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಬಲವಾದ ಮತ್ತು ದೃಢವಾದ ಸಾಕ್ಷ್ಯಗಳಿಲ್ಲದೆ ಯಾವುದೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನ್ಯಾಯಾಲಯಗಳಿಗೆ ಇರುವುದಿಲ್ಲ. ಆಪಾದಿತ ವ್ಯಕ್ತಿಯನ್ನು ಬೇಕಾಬಿಟ್ಟಿಯಾಗಿ ತಮ್ಮೆದರು ಕರೆಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸಿಪಿಸಿಯ ಕಲಂ 319ರಡಿ ತನಿಖೆ ಅಥವಾ ವಿಚಾರಣೆ ವೇಳೆ ಆರೋಪಿ ಅಪರಾಧ ಮಾಡಿರುವುದು ಸಾಕ್ಷಿ, ಆಧಾರಗಳಿಂದ ಸಾಬೀತಾದಾಗ ಆತನ ವಿರುದ್ಧ ನ್ಯಾಯಾಲಯ ಮುಂದುವರಿಯಬಹುದು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಪಿ ಎಸ್ ನರಸಿಂಹ ಅವರ ಪೀಠವು ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಸಂದರ್ಭ ಹೇಳಿದೆ.

ಕಲಂ 319ರ ಅಡಿ ಅಧಿಕಾರವನ್ನು ಬಳಸಲು ಮಾರ್ಗಸೂಚಿಯನ್ನು ನ್ಯಾಯಾಲಯದ ಸಂವಿಧಾನ ಪೀಠವು ರೂಪಿಸಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ಬಲವಾದ ಮತ್ತು ದೃಢವಾದ ಸಾಕ್ಷ್ಯವು ಲಭಿಸಿದ್ದರೆ ಮಾತ್ರ ಕಲಂ 319ರ ಅಡಿ ಅಧಿಕಾರವನ್ನು ಬಳಸಬೇಕು ಎಂಬ ತತ್ವವನ್ನು ಈ ಮಾರ್ಗಸೂಚಿಯು ಒಳಗೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button