ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಪ್ರಧಾನಿ ಮೋದಿಯವರ 71ನೇ ಜನ್ಮದಿನ: ಪತ್ರದ ಮೂಲಕ ಶುಭ ಹಾರೈಸಿದ ಸ್ವಾಮೀಜಿ

ಧಾರವಾಡ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಶುಭ ಹಾರೈಸಿದ್ದಾರೆ.

ಮಠದಲ್ಲಿ‌ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ಪೂಜೆಗಳನ್ನು ಮಾಡಿಸಿದರು. ಈ ವೇಳೆ ಮೂರು ಸಾವಿರ ಮಠದ ಪರಮಪೂಜ್ಯ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಪತ್ರ ಬರೆಯುವ ಮೂಲಕ ಪ್ರಧಾನಿಯವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇನ್ನೂ ಪತ್ರದಲ್ಲಿ ಪ್ರಧಾನಿಗಳ ಜನರ ಯೋಜನೆಗಳ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂಚೆ ಪೆಟ್ಟಿಗೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಶಯ ಪತ್ರವನ್ನು ರವಾನೆ ಮಾಡಿದರು.

ಧಾರವಾಡದ ಕಲಾವಿದನಿಂದ ಬಾಲೆ ಎಳೆಯಲ್ಲಿ ಅರಳಿದ ಪ್ರಧಾನಿ ಮೋದಿ ಚಿತ್ರ

ಮೋದಿ ಜನ್ಮ ದಿನವನ್ನು ಆಚರಣೆ ಅಂಗವಾಗಿ ಧಾರವಾಡದ ಕೆಲಗೇರಿ ಬಡಾವಣೆಯ ನಿವಾಸಿಯಾಗಿರುವ ಕಲಾವಿದ ಮಂಜುನಾಥ ಹಿರೇಮಠ್‌ರವರು ವಿಶೇಷವಾಗಿ ಮೋದಿಯವರ ಚಿತ್ರವನ್ನು ಬಿಡಿಸುವ ಪ್ರಧಾನಿಯವರಿಗೆ ಹುಟ್ಡು ಹಬ್ಬದ ಶುಭಾಶಯವನ್ನು ಕೊರಿದ್ದಾರೆ.

ಬಾಳೆ ಎಲೆಯಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸುವ ಮೂಲಕ ವಿಶೇಷವಾಗಿ ಪ್ರಧಾನಮಂತ್ರಿಯವರಿಗೆ ಶುಭಾಶಯ ಕೊರಿದ್ದು, ತಮ್ಮ ಅಭಿಮಾನವನ್ನು ಅಭಿಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವರ ಬಾಳೆ ಎಲ್ಲೆಯಲ್ಲಿ ಮೋದಿ ಚಿತ್ರವು ಬಿಜೆಪಿಗರಿಗೆ ಹಾಗೂ ‌ಮೋದಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button