ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ
ಬೂಟ್ ನೆಕ್ಕಿ ನಾನು ಆರು ಸಲ ಎಂಪಿ ಆಗಿಲ್ಲ: ಸುಬ್ರಮಣಿಯನ್ ಸ್ವಾಮಿಗೆ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಕಲಬುರಗಿ: ಬೂಟ್ ನೆಕ್ಕಿ ನಾನು ಆರು ಸಲ ಎಂಪಿ ಆಗಿಲ್ಲ ಎಂಬ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಕಲಬುಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಬ್ರಮಣಿಯನ್ ಸ್ವಾಮಿ ಅವರ ಬಗ್ಗೆ ಏನು ಹೇಳಿಲ್ಲ. ಅವರು ಇಂಡಿಪೆಂಡೆಂಟ್ ಥಿಕ್ಕಿಂಗ್ ಪೊಲೀಟಿಷಿಯನ್ ಅಂತಾ ಹೇಳಿದ್ದೇನಷ್ಟೆ ಎಂದರು.
ಆದರೆ ಅವರು ಹಾಗೆ ಟ್ವೀಟ್ ಮಾಡಿದ್ದು ಯಾಕೆ ಗೊತ್ತಿಲ್ಲ, ಅವರ ಟ್ವೀಟ್ ಮಾಡಿರುವುದಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.




