ನಿಲ್ಲದ ಆನೆದಾಳಿ; ಅರಣ್ಯ ಸಿಬ್ಬಂದಿ ವಿರುದ್ಧ ಜನರ ಅಸಮಾಧಾನ

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಮುಂದುವರೆಯುತ್ತಲೆ ಇದೆ ಕಾಡಾನೆಗಳ ದಾಳಿ. ಆನೆ ನಡೆದದ್ದೇ ದಾರಿ ಎಂಬಂತಾಗಿದೆ ಈ ಜಿಲ್ಲೆಯಲ್ಲಿ. ಕಾಡಿಂದ ಕಾಡಿಗೆ ಆನೆಗಳು ಹೋಗ್ತಾ ಇರುತ್ತದೆ ನಾವೇನ್ ಮಾಡೋಕೆ ಆಗುತ್ತೆ ಎಂದು ಜವಾಬು ನೀಡಿ ಅರಣ್ಯಾಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಲೆ ಇದ್ದಾರೆ. ಶಾಶ್ವತವಾಗಿ ಆನೆದಾಳಿಯಿಂದ ಮುಕ್ತಿ ಯಾವಾಗ ಸಿಲುಕಲಿದೆ ಎಂದು ಪ್ರತಿದಿನ ರೈತರು ಪ್ರಶ್ನೆ ಮಾಡುತ್ತಲೆ ಇದ್ದಾರೆ, ಅದಕ್ಕೆ ಉತ್ತರ ಮಾತ್ರ ಇನ್ನೂ ದೊರಕಿಲ್ಲ.

ಇದಕ್ಕೆ ಇಂದು ಪ್ರತ್ಯಕ್ಷ ಉದಾಹಾರಣೆಯಾಗಿರುವುದು ರೈತರು ಕಷ್ಟ ಪಟ್ಟು ಬೆಳೆದಿದ್ದ ಮೆಕ್ಕೆಜೋಳವನ್ನ ನಾಶಗೊಳಿಸಿರುವುದು. ಮಾಗಡಿ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ರೈತನೋರ್ವ ಬೆಳೆದಿದ್ದ ಮೆಕ್ಕೆಜೋಳವನ್ನ ಸಂಪೂರ್ಣವಾಗಿ ಹಾನಿ ಮಾಡಿದೆ. ಇದಲ್ಲದೆ ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಮಳೂರು ಕಣ್ವ ನದಿಯಲ್ಲಿ ಇದೇ ಆನೆಗಳು ಬೀಡು ಬಿಟ್ಟು ಸ್ಥಳೀಯ ಜನರ ಆತಂತಕ್ಕೆ ಕಾರಣವಾಗಿದೆ.
ಇವತ್ತು ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಬಂದಿದ್ರು ನಾನು ಅವರಿಗೆ ಮಾಹಿತಿ ಗ್ರಾಮದಲ್ಲಿ ಆನೆ ಸಂಚಾರದ ಬಗ್ಗೆ ಮಾಹಿತಿ ಕೊಟ್ಟೆ, ಅವರು ಕಾಡಿಂದ ಕಾಡಿಗೆ ಹೋಗ್ತಾ ಇರುತ್ತೆ ಸಾರ್ ನಾವೇನ್ ಮಾಡೋಕೆ ಆಗುತ್ತೆ ಅಂತ ಜವಾಬು ನೀಡಿ ಜೀಪು ಏರಿದ್ರು ಅಂತ ಅರಳಕುಪ್ಪೆ ಗ್ರಾಮದ ಯುವ ಮುಖಂಡ ಅಂಬಿ ವಿಜಯ್ ದೂರುತ್ತಾರೆ.
ಮಾಗಡಿ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಕಳೆದೊಂದು ವಾರಗಳಿಂದಲೂ ಗಡಿ ಗ್ರಾಮಗಳಲ್ಲಿ ನಿರಂತರ ಆನೆಗಳ ದಾಳಿ ನಡೆಯುತ್ತಲೆ ಇವೆ.
ಈ ಸಂಬಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ರು ಕೂಡ ಯಾವುದೇ ಪ್ರಯೋಜನ ಮಾತ್ರ ಆಗುತ್ತಿಲ್ಲ. ಕಾಡಾನೆಗಳ ಹಾವಳಿಯನ್ನ ತಡೆಗಟ್ಟುವಲ್ಲಿ ಅರಣ್ಯಾಧಿಕಾರಿಗಳು ಕೂಡ ವಿಫಲರಾಗಿದ್ದಾರೆಂದು ರೈತರು ಹಾಗೂ ನಾಗರೀಕರು ಆರೋಪಿಸಿದ್ದಾರೆ.




