Breaking NewsLatestಕ್ರಿಕೆಟ್ಕ್ರೀಡೆ
Lasith Malinga: ಎಲ್ಲಾ ಮಾದರಿಯ ಕ್ರಿಕೆಟ್ ಗೆ ಲಸಿತ್ ಮಾಲಿಂಗ ವಿದಾಯ

ಕೊಲಂಬೊ: ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿರುವ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಈಗ ಟಿ20 ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ.
2011ರಲ್ಲಿ ಟೆಸ್ಟ್ ಹಾಗೂ 2019ರಲ್ಲಿ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಾಲಿಂಗ ಅವರನ್ನು ಜನವರಿ ತಿಂಗಳಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೈ ಬಿಟ್ಟಿತ್ತು. 290 ಟಿ20 ಪಂದ್ಯಗಳನ್ನು ಆಡಿರುವ ಮಾಲಿಂಗ 395 ವಿಕೆಟ್ ಗಳಿಸಿದ್ದರು.
ಶ್ರೀಲಂಕಾ ಕ್ರಿಕೆಟ್ ತಂಡ, ಮುಂಬೈ ಇಂಡಿಯನ್ಸ್, ಮೆಲ್ಬೋರ್ನ್ ಸ್ಟಾರ್ಸ್, ಕೆಂಟ್ ಕ್ರಿಕೆಟ್ ಕ್ಲಬ್, ರಂಗ್ಪೂರ್ ರೈಡರ್ಸ್, ಗಯಾನ ವಾರಿಯರ್ಸ್, ಮರಾಥ ವಾರಿಯರ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ ತಂಡಗಳ ಪರ ಆಡಿದ್ದರು.
