ಕಲಬುರಗಿಯಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳ ತೆರುವಿಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ಜಿಲ್ಲಾಡಳಿತ

ಕಲಬುರಗಿ: ಅನಧಿಕೃತ ದೇವಸ್ಥಾನಗಳ ತೆರುವಿಗೆ ಸುಪ್ರಿಂ ಕೊರ್ಟ್ ಆದೇಶ ಹಿನ್ನಲೆ ಕಲಬುರಗಿಯಲ್ಲಿ 140 ಕ್ಕೂ ಅಧಿಕ ದೇವಸ್ಥಾನಗಳ ಪಟ್ಟಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಮಾಡಿದೆ.
ಮೊದಲ ಹಂತವಾಗಿ 30 ದೇವಸ್ಥಾನಗಳನ್ನ ತೆರುವು ಮಾಡೋದಕ್ಕೆ ಪಾಲಿಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಆದ್ರೆ ದೇವಸ್ಥಾನ ತೆರುವ ಮಾಡೋದಕ್ಕೆ ಸ್ಥಳಿಯರಿಂದ ವಿರೋಧ ವ್ಯಕ್ತವಾಗುವ ಕಾರಣಕ್ಕೆ ಸ್ಥಳಿಯ ಮುಖಂಡರ ಜೊತೆ ಚರ್ಚಿಸಿ ತೆರುವು ಕಾರ್ಯಚರಣೆಗೆ ಮುಂದಾಗೋಕೆ ಪಾಲಿಕೆ ಸಿದ್ದವಾಗುತ್ತಿದೆ. ಈ ಹಿಂದೆ ಆಗಸ್ಟ್ 18 ರಂದು ಕಲಬುರಗಿಯ ಯಮುನಾ ನಗರದಲ್ಲಿರುವ ಹಾದಿ ಬಸವಣ್ಣ ದೇವಸ್ಥಾನ ತೆರವಿಗೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಚಳಿ ಬಿಡಿಸಿದ್ದರು. ಮಿಂಚಿನ ಪ್ರತಿಭಟನೆ ಮಾಡಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಇದೀಗ ಮತ್ತೊಮ್ಮೆ ದೇವಾಲಯಗಳನ್ನ ತೆರುವು ಮಾಡೋದಕ್ಕೆ ಸಿದ್ದವಾಗುತ್ತಿದೆ.
ದೇವಸ್ಥಾನಗಳ ತೆರುವಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪಾಲಿಕೆ ಅಧಿಕಾರಿಗಳು ದೇವಸ್ಥಾನದ ತಂಟೆಗೆ ಬಂದ್ರೆ ಸುಮ್ಮನೆ ಬಿಡೋದಿಲ್ಲ, ಹಿಂದು ವಿರೋಧ ಚಟುವಟಿಕೆ ಮಾಡಿದ್ರೆ ನಮ್ಮ ಜೀವ ಹೊದ್ರು ತೆರುವು ಮಾಡೋದಕ್ಕೆ ಬಿಡೋದಿಲ್ಲ, ನಮ್ಮ ಜೀವ ಬಿಡ್ತೆವೆ ಹೊರತು ದೇವಸ್ಥಾನದ ಒಂದು ಕಲ್ಲು ತೆಗೆಯೋದಕ್ಕು ಬಿಡೋದಿಲ್ಲ, ಸರ್ಕಾರಕ್ಕೆ ತಾಕತ್ತು ಇದ್ರೆ ಅನಧಿಕೃತ ಮಸೀದಿ , ಚರ್ಚ್ ಗಳನ್ನ ಮೊದಲು ತೆರುವುಗೊಳಿಸಲಿ ನಂತರ ದೇವಸ್ಥಾನಗಳ ತಂಟೆಗೆ ಬರಲಿ ಅಂತ ಕಿಡಿಕಾರುತ್ತಿರುವ ನಾಗರೀಕರು, ದೇವಸ್ಥಾನದ ಒಂದು ಕಲ್ಲು ತೆಗೆಯಬೇಕಾದ್ರೆ ನಮ್ಮ ಹೆಣದ ಮೇಲೆಯೆ ಕಾಲಿಟ್ಟು ತೆಗೆಯಬೇಕು ಅಂತ ಕೆಂಡ ಕಾರುತ್ತಿದ್ದಾರೆ.




