Cooker: ತಳ ಹಿಡಿದ ಕುಕ್ಕರನ್ನು ಹೀಗೆ ಸ್ವಚ್ಛಗೊಳಿಸಿ.

ಕೆಲವೊಮ್ಮೆ ಅಡಿ ಭಾಗಕ್ಕೆ ಹಾಕಿದ ನೀರು ಕಡಿಮೆಯಾಗುವ ಕಾರಣಕ್ಕೆ ಕುಕ್ಕರ್ ತಳಭಾಗ ಸುಟ್ಟು ಹೋಗುತ್ತದೆ. ಇದರ ಕಲೆಯನ್ನು ಹೇಗೆ ತೆಗೆದುಹಾಕಬಹುದು? ಕುಕ್ಕರ್ ಗೆ ನೀರು ಹಾಕಿ ಸಣ್ಣ ಉರಿಯಲ್ಲಿ ಅದನ್ನು ಹತ್ತು ನಿಮಿಷ ಕುದಿಸಿ. ಆಗ ಅಲ್ಲಿ ಅಂಟಿಕೊಂಡ ಎಲ್ಲಾ ಪದಾರ್ಥಗಳನ್ನು ತಿಕ್ಕಿ ತೊಳೆಯುವುದು ಅಥವಾ ಸ್ಕ್ರಬ್ ಮಾಡುವುದು ಸುಲಭವಾಗುತ್ತದೆ.
ಹೆಚ್ಚು ಬಾರಿ ಬಳಕೆಯಾಗುವ ಕುಕ್ಕರ್ ದಿನಗಳೆದಂತೆ ಕಪ್ಪುಕಲೆಗಳಿಂದ ತುಂಬಿಹೋಗುತ್ತದೆ. ಇದರ ನಿವಾರಣೆಗೆ ಸ್ವಲ್ಪ ಈರುಳ್ಳಿ ಸಿಪ್ಪೆಯನ್ನು ಅದಕ್ಕೆ ಹಾಕಿ ಗ್ಯಾಸ್ ಮೇಲಿಟ್ಟು ಕುದಿಸಿ ಅರ್ಧ ಗಂಟೆ ಬಳಿಕ ಅಂದರೆ ಸಂಪೂರ್ಣ ತಣ್ಣಗಾದ ಬಳಿಕ ಗಟ್ಟಿಯಾಗಿ ಸ್ಕ್ರಬ್ ಮಾಡಿ. ಇದರಿಂದಲೂ ಕಲೆಗಳು ದೂರವಾಗುತ್ತವೆ.
ಅಡುಗೆ ಸೋಡಾದ ನೆರವಿನಿಂದಲೂ ಕಲೆಗಳನ್ನು ದೂರ ಮಾಡಬಹುದು. ಗುತ್ತರಗಿ ನೀರು ತುಂಬಿಸಿ 3 ಚಮಚ ಅಡುಗೆ ಸೋಡಾ ಬೆರೆಸಿ. ಇದಕ್ಕೆ ಬೆಚ್ಚಗಿನ ನೀರು ಸುರಿದು ಸ್ವಲ್ಪ ಹೊತ್ತು ಮುಚ್ಚಿಡಿ. ನೀರು ತಣ್ಣಗಾದ ಬಳಿಕ ಕುಕ್ಕರನ್ನು ತಿಕ್ಕಿ ತೊಳೆದರೆ ಅದಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸ್ವಚ್ಛಗೊಳಿಸಬಹುದು.




