ಜಿಲ್ಲಾ ಸುದ್ದಿ

ಲಾಕ್​ಡೌನ್ ಎಫೆಕ್ಟ್; ಹಸಿವಿನಿಂದ ಕಂಗೆಟ್ಟ ಅಲೆಮಾರಿ ಜನಾಂಗ 

ಬೆಳಗಾವಿ: ಹೌದು ಲಾಕ್ ಡೌನ್ ಎಫೆಕ್ಟ್ ನಿಂದ ವಲಸೆ ಕಾರ್ಮಿಕರು ಹಾಗೂ ಅಲೆಮಾರಿಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ, ತುತ್ತು ಅನ್ನಕ್ಕಾಗಿ ಕಷ್ಟದ ಜೀವಿಗಳಿಗಳು ಸಹಾಯದ ಹಸ್ತಕ್ಕೆ ಅಂಗಲಾಚುತ್ತಿದ್ದಾರೆ.

ಹುಕ್ಕೇರಿಯ ಹೊರ ವಲಯದಲ್ಲಿ ಮಹಾರಾಷ್ಟ್ರ ದ ಸಾಂಗ್ಲಿ ಮೂಲದ 9 ಕುಟುಂಬಗಳು ಹಲವು ತಿಂಗಳುಗಳಿಂದ ಬಿಡು ಬಿಟ್ಟಿವೆ,ಗಿಡಮೂಲಿಕೆ ಹಾಗೂ ನಾಟಿ ವೈದ್ಯ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದೈನಂದಿನ ದುಡಿಮೆಯಿಂದ ಬದುಕುವ ಇವರಿಗೆ ಈಗ ದುಡಿಮೆಯೇ ಇಲ್ಲದಂತಾಗಿದೆ.

ಕಳೆದ 7 ದಿನದ ಹಿಂದೆ ಇವರ ಸಂಕಷ್ಟ ನೋಡಲಾಗದೆ ಹುಕ್ಕೇರಿ ತಹಶೀಲ್ದಾರ್ ಡಾ. G H ಹೂಗಾರ್ ಎಲ್ಲ ಕುಟಂಬಗಳಿಗೆ ರೇಷನ್ ಕಿಟ್ ನೀಡಿ ಸಹಾಯ ಮಾಡಿದ್ದರು, ಇನ್ನು ಲಾಕ್ ಡೌನ್ ಇರುವುದರಿಂದ ತುತ್ತು ಅನ್ನಕ್ಕಾಗಿ ಪಟ್ಟಣಗಳಲ್ಲಿ ಮಕ್ಕಳ ಸಮೇತ ಈ ಕುಟುಂಬಗಳು ಭಿಕ್ಷೆ ಬೇಡಲು ಮುಂದಾಗುತ್ತಿವೆ.

ಈ ಬಗ್ಗೆ ಮಾತನಾಡಿದ ಮುಖ್ಯಸ್ಥನೊಬ್ಬ ತಮಗೆ ಭಿಕ್ಷೆ ಬೇಡುವ ಮನಸ್ಸು ಇಲ್ಲ, ಆದ್ರೆ ಮನೆಯಲ್ಲಿರುವ ಚಿಕ್ಕ ಚಿಕ್ಕ ಮಕ್ಕಳು ಹಾಗೂ ಹಿರಿಯರ ಸಲುವಾಗಿ ಆದ್ರೂ ನಾವು ಅನ್ನಕ್ಕಾಗಿ ಕೈ ಒಡ್ಡುವ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹುಕ್ಕೇರಿಯ ಹೊರವಲಯದ ಬಯಲು ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿರುವ ಈ ಒಂಬತ್ತು ಕುಟುಂಬಗಳಲ್ಲಿ ಸುಮಾರು 70 ಜನ ಇದ್ದಾರೆ, ಪ್ರತಿ ಗಳಿಗೆಯು ಕೂಡ ತಮಗೆ ಆಹಾರದ ಚಿಂತೆಯೇ ಆಗಿದ್ದು ಯಾರಾದ್ರೂ ಅಧಿಕಾರಿಗಳು, ರಾಜಕಾರಣಿಗಳು, ಅಥವಾ ಸಮಾಜ ಸೇವಕರು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button