ಮನರಂಜನೆಸಿನಿಮಾಸೆಲೆಬ್ರಿಟಿ
ಮಿಮಿ ಚಿತ್ರ ಯಶಸ್ಸಿಯಾದ ಖುಷಿಗೆ ಇಂತಹ ಕೆಲಸ ಮಾಡಿದ ನಟಿ ಕೃತಿ ಸನೂನ್

ನೆಟ್ ಫ್ಲಿಕ್ಸ್ ಚಿತ್ರ ಮಿಮಿಯಲ್ಲಿ ಬಾಡಿಗೆ ತಾಯಿಯ ಪಾತ್ರವನ್ನು ಬಹಳ ಅದ್ಭುತವಾಗಿ ನಿರ್ವಹಿಸಿದ್ದಕ್ಕೆ ನಟಿ ಕೃತಿ ಸನೂನ್ ಸಾಕಷ್ಟು ಪ್ರಶಂಸೆ ಪಡೆದಿದ್ದಾರೆ. ಇದೀಗ ಅವರ ಮಿಮಿ ಚಿತ್ರ ಯಶಸ್ಸಿಯಾದ ಖುಷಿಗೆ ನಟಿ ಕೃತಿ ಸನೂನ್ ತನಗೆ ತಾನೇ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.
ನಟಿ ಕೃತಿ ಸನೂನ್ ಮಿಮಿ ಚಿತ್ರ ಯಶಸ್ಸಿಯಾಗಿದ್ದಕ್ಕೆ ಮರ್ಸಿಡಿಸ್ ಮೇಬ್ಯಾಕ್ ಜಿಎಲ್ ಎಸ್ 600ಅನ್ನು ತನಗೆ ಉಡುಗೊರೆಯಾಗಿ ತಾನೇ ಖರೀದಿಸಿದ್ದಾರೆ. ಈ ಕಾರಿನ ಬೆಲೆ 2.43 ಕೋಟಿ ರೂಪಾಯಿಗಳು ಎನ್ನಲಾಗಿದೆ. ಮುಂಬೈನ ಸಾಂತಾಕ್ರೂಜ್ ನಲ್ಲಿರುವ ಮ್ಯಾಡಾಕ್ ಫಿಲಂಸ್ ಕಚೇರಿಯಲ್ಲಿ ನಟಿ ತನ್ನ ಹೊಸ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಕಾರನ್ನು ಖರೀದಿಸುವುದು ನಟಿಯ ಕನಸಾಗಿತ್ತಂತೆ. ಹಾಗಾಗಿ ಇದೀಗ ಮಿಮಿ ಯಶಸ್ಸಿನ ಬಳಿಕ ನಟಿಯ ಕನಸು ನನಸಾದ ಖುಷಿಯಲ್ಲಿದ್ದಾಳೆ. ಇತ್ತೀಚೆಗೆ ಇದೇ ರೀತಿಯ ಕಾರನ್ನು ನಟ ಅರ್ಜುನ್ ಕಪೂರ್ ಅವರು ಕೂಡ ಖರೀದಿಸಿದ್ದರು ಎಂಬುದಾಗಿ ತಿಳಿದುಬಂದಿದೆ.




