ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಮಹಿಳೆಯೊಂದಿಗೆ ಅಸಭ್ಯ ವರ್ತನೆ ಹಿನ್ನೆಲೆ: ಮಾಜಿ ಕಾರ್ಪೊರೇಟರ್​ ವಿರುದ್ಧ ಎಫ್‌ಐಆರ್

ಧಾರವಾಡ : ಕಳೆದ ಮೂರು ದಿನಗಳ ಹಿಂದೆ ಮಾಜಿ ಪಾಲಿಕೆ ಸದಸ್ಯರೊಬ್ಬರು ಮಹಿಳೆಯೊಂದಿಗೆ ಧಾರವಾಡದಲ್ಲಿ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೆಡಿಎಸ್‌ನ ಮಾಜಿ ಪಾಲಿಕೆ ಸದಸ್ಯನ ಮೇಲೆ ಎಫ್​​ಐಆರ್​ ದಾಖಲಾಗಿದೆ.

ಧಾರವಾಡದ ಮೂರನೇ ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಶ್ರೀಕಾಂತ್ ಜಮನಾಳ ಮೇಲೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಂದಿಗೆ ಅಸಭ್ಯ ವರ್ತನೆ ಹಾಗೂ ಜೀವ ಬೇದರಿಕೆ ಆರೋಪದ ಮೇಲೆ ಮಹಿಳೆ ದೂರು ದಾಖಲು‌ ಮಾಡಿದ್ದಾರೆ.

ಘಟನೆಯ ಹಿನ್ನೆಲೆ:

ಕಳೆದ ಮೂರು ದಿನಗಳ ಹಿಂದೆ ಜೆಡಿಎಸ್ ಮುಖಂಡ ಶ್ರೀಕಾಂತ ಜಮೀನಾಳ ಅವರು ಧಾರವಾಡದ ಸತ್ತೂರಿನ ಡೆಂಟಲ್ ಕಾಲೇಜು ಬಳಿ ಅನುಮತಿ ಅತ್ತಿಗೇರಿ ಮಹಿಳೆ ಜೊತೆಗೆ ಅಸಭ್ಯವಾಗಿ ವರ್ತಿಸಿದರು. ಮಹಿಳೆಯನ್ನು ಕೈ ಹಿಡಿದು ಎಳೆದಾಡಿ ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಲು ಯತ್ನಿಸಿದ್ದರು. ಈ ವೇಳೆ ಸ್ಥಳಿಯರೊಬ್ಬರು ವಿಡಿಯೋವನ್ನು ಸೆರೆ ಹಿಡಿದಿದ್ದು, ವಿಡಿಯೋ ವೈರಲಾದ ಬಳಿಕ ಮಾಜಿ ಪಾಲಿಕೆ ಸದಸ್ಯನ ವಿರುದ್ಧ ಅವಳಿನಗರದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಇನ್ನೂ ಶ್ರೀಕಾಂತ ಜಮೀನಾಳ ಹಾಗೂ ಮಹಿಳೆಯೊಂದಿಗೆ ಹಣದ ವ್ಯವಹಾರ ಇತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ ಮಹಿಳೆಯ ಮನೆಗೆ ಹೋದಾಗ ಬಾಗಿಲು ತೆರೆಯದೇ ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆ ಬಾಗಿಲು ತೆರೆಯದ್ದಕ್ಕೆ ಕೋಪ‌ಗೊಂಡ ಜಮನಾಳ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೇ, ಮಹಿಳೆಯ ಮೇಲೆ ಹಲ್ಲೆಗೈದಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ.

ಮಾಜಿ ಪಾಲಿಕೆ ಸದಸ್ಯನ ಕೃತ್ಯದಿಂದ ಆತಂಕಗೊಂಡಿರುವ ಮಹಿಳೆ ಜೀವ ಬೆದರಿಕೆಯಿಂದಾಗಿ ಶ್ರೀಕಾಂತ ಜಮನಾಳ ವಿರುದ್ಧ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲು‌ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button