ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಕರ್ಕಿ ಬಸವೇಶ್ವರ ನಗರದಲ್ಲಿ ನಡೆದ ಘಟನೆ ರಾಜಕೀಯ ಪ್ರೇರಿತವಲ್ಲ: ಶ್ರೀನಿವಾಸ್ ಬೆಳದಡಿ

ಧಾರವಾಡ : ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಫಲಿತಾಂಶ ದಿನ ಸಂಜೆ ಹುಬ್ಬಳ್ಳಿಯ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದ ಘಟನೆಯು ರಾಜಕೀಯ ಪ್ರೇರಿತವಲ್ಲ. ವಿಜಯ ಗುಂಟ್ರಾಳ ನಮ್ಮ ಜನಪ್ರಿಯತೆ ಸಹಿಸಿಕೊಳ್ಳಲಾಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ್ ಬೆಳದಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆ ಫಲಿತಾಂಶದ ದಿನದಂದು ಓಣಿಯ ಚಿಕ್ಕ ಮಕ್ಕಳು ಗಲಾಟೆ ಮಾಡಿದ್ದಾರೆ. ಅದೂ ಕೊಂಚ ವಿಕೋಪಕ್ಕೆ ಹೋಗಿತ್ತು. ಆದರೆ ಯಾವುದೇ ರೀತಿಯ ಹಲ್ಲೆಯಾಗಲ್ಲಿ, ಮನೆಗೆ ಕಲ್ಲು ಎಸೆಯುವುದದಾಗಲ್ಲಿ ನಡೆದಿಲ್ಲ. ಚಿಕ್ಕ ಮಕ್ಕಳ ಗಲಾಟೆ ಇಟ್ಟುಕೊಂಡು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ, ನನ್ನನ್ನು ಒಳಗೊಂಡು ಅಮಾಯಕ 16 ಜನರ ಮೇಲೆ ದೂರು ದಾಖಲು ಮಾಡಿದ್ದಾರೆ. ಈಗಾಗಲೇ ಅದರ ಕುರಿತು ಪೊಲೀಸ್ ಅಧಿಕಾರಿಗಳು ದೂರು ಪ್ರತಿ ದೂರು ದಾಖಲಿಸಿಕೊಂಡಿದ್ದಾರೆ. ನಮ್ಮ ಮೇಲಿನ ದೂರಿಗೆ ಜಾಮೀನು ಪಡೆದುಕೊಂಡಿದ್ದೇವೆ. ನಾವು ಕೂಡಾ ದೂರು ದಾಖಲಿಸಿದ್ದು, ಪೋಲಿಸರು ಈ ಬಗ್ಗೆ ಸೂಕ್ತ ತನಿಖೆ ಕೈಕೊಳ್ಳಬೇಕು ಎಂದರು.

ಇನ್ನು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಜನರು ನೀಡಿರುವ ತೀರ್ಪನ್ನು ನಾವು ಒಪ್ಪಿಕೊಳ್ಳಲೇಬೇಕು. ನನಗೆ ಯಾವುದೇ ಹಲ್ಲೇ, ಜಗಳ ಮಾಡುವ ಉದ್ದೇಶವಿಲ್ಲ. ಈ ನಿಟ್ಟಿನಲ್ಲಿ ನಾನು ಜನರೊಂದಿಗೆ ಒಡನಾಟ ಇಟ್ಟುಕೊಂಡು ಬರುವ ಚುನಾವಣೆ ಎದುರಿಸಲು ಸಿದ್ದಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button