ಶಿಖರ್ ಧವನ್ ಜೊತೆಗಿನ ದಾಂಪತ್ಯಕ್ಕೆ ಕೊನೆಹಾಡಿದ ಆಯೆಷಾ ಮುಖರ್ಜಿ

ನವದೆಹಲಿ: ಕ್ರಿಕೆಟ್ ಆಟಗಾರ ಶಿಖರ್ ಧವನ್ ಮತ್ತು ಆಯೆಷಾ ಮುಖರ್ಜಿ ದಾಂಪತ್ಯ ಕೊನೆಗೊಂಡಿದೆ. ಮದುವೆಯಾಗಿ 8 ವರ್ಷಗಳ ಬಳಿಕ ಆಯೆಷಾ ಧವನ್ಗೆ ವಿಚ್ಚೇದನ ನೀಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಈ ಬಗ್ಗೆ ಆಯೆಷಾ ಬರೆದುಕೊಂಡಿದ್ದು, ಇದು ತಮ್ಮ ಬದುಕಿನಲ್ಲಿ ಎರಡನೇ ವಿಚ್ಚೇದನ ಎಂದು ಹೇಳಿದ್ದಾರೆ.
ಧವನ್ ಮತ್ತ ಆಯೆಷಾ 2012ರಲ್ಲಿ ಮದುವೆಯಾಗಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ.
ಸದ್ಯ ಧವನ್ ಕೋವಿಡ್ ಕಾರಣದಿಮದ ಮುಂದಕ್ಕೆ ಹೋಗಿರುವ ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಆಡಲು ಯುಇಎನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ನಡುವೆಯೇ ಪತ್ನಿ ಆಯೆಷಾ ಈ ವಿಚ್ಚೇದನ ವಿಚಾರ ಪ್ರಕಟಿಸಿದ್ದು, ಧವನ್ ಪ್ರತಿಕ್ರಿಯಿಸಿಲ್ಲ.

ಮದುವೆಯಾದಂದಿನಿಂದ ಕಳೆದ ಎರಡು ವರ್ಷಗಳವರೆಗೂ ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತಿದ್ದ ಧವನ್-ಆಯೆಷಾ, ಐಪಿಎಲ್ ಪಂದ್ಯದ ವೆಳೆಯೂ ಡಗ್ಔಟ್ನಲ್ಲಿ ಕಾಣಿಸಿಕೊಂಡು ಧವನ್ಗೆ ಚಿಯರ್ ಮಾಡುತ್ತಿದ್ದುದಿತ್ತು. ಆದರೆ ಅದೆಲ್ಲ ನಿಂತು ಆಗಲೇ ಎರಡು ವರ್ಷಗಳೇ ಸಂದಿಹೋಗಿದ್ದವು.
ಆಸ್ಟ್ರೇಲಿಯಾದ ಮೆಲ್ಬೋರ್ನ್ನವರಾದ ಆಯೆಷಾ ಅವರಿಗೆ ಧವನ್ ಜೊತೆಗಿನದು ಎರಡನೇ ಮದುವೆ. ಅದಕ್ಕೂ ಮೊದಲು ಅವರು ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಮದುವೆಯಾಗಿ, ಅವರಿಂದ ಎರಡು ಹೆಣ್ಣುಮಕ್ಕಳನ್ನು ಪಡೆದಿದ್ದರು.
ಧವನ್ ಜೊತೆಗಿನ ವಿಚ್ಚ್ಏದನಕ್ಕೆ ನಿಖರ ಕಾರಣವನ್ನು ಆಯೆಷಾ ಸ್ಪಷ್ಟಪಡಿಸದಿದ್ದರೂ,
ಕುಟುಂಬದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿರುವ ಸುಳಿವು ನೀಡಿದ್ದಾರೆ.
ಇನ್ಸ್ಟಾಗ್ರಾಂನ ತಮ್ಮ ಪೋಸ್ಟ್ನಲ್ಲಿ ಈ ಬಗ್ಗೆ ತುಸು ದೀರ್ಘವಾಗಿಯೇ ಬರೆದುಕೊಂಝಡಿರುವ ಆಯೆಷಾ, ಈ 2ನೇ ವಿಚ್ಚೇದನ ಪಡೆಯುವವರೆಗೂ ವಿಚ್ಚೇದನ ಎಂಬುದೊಂದು ಕೆಟ್ಟ ಪದ ಎಂದೇ ಭಾವಿಸಿದ್ದೆ ಎಂದು ಹೇಳಿರುವುದು ಸೂಚ್ಯವಾಗಿದೆ.
