Latestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದು ತಿಂಗಳಾಗಿದೆ, ಈಗಲೆ ಪಾಸ್ ಫೇಲ್ ಹೇಳಲು ಬರುವುದಿಲ್ಲ: ಜಗದೀಶ್ ಶೆಟ್ಟರ್

ಧಾರವಾಡ : ಬಸವರಾಜ ಬೊಮ್ಮಾಯಿ‌ ಅವರ ನೇತೃತ್ವದಲ್ಲಿ ಸರ್ಕಾರ ಬಂದು ಈಗ ಒಂದು ತಿಂಗಳು‌ ಆಗಿದೆ. ಅಷ್ಟರಲ್ಲಿಯೇ ಸರ್ಕಾರ ಪಾಸ್ ಫೆಲ್ ಕುರಿತು ಹೇಳಲು ಬರುವುದಿಲ್ಲ. ಅದಕ್ಕೆ ಇನ್ನೂ ಕಾಲ ಬೆರಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇನ್ನೂ ಸಮಯಾವಕಾಶ ಬೇಕಾಗುತ್ತದೆ ಆಗ ಮಾತ್ರ ಬೊಮ್ಮಾಯಿ ನೇತೃತ್ವದ ಸರ್ಕಾರ ಪಾಸೋ ಅಥವಾ ಫೆಲೋ ಅಂತಾ ಹೇಳಬಹುದು. ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುವುದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡುತ್ತೆವೆ ಎಂದರು.

ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸಬೇಕು ಅನ್ನುವುದ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ವರಿಷ್ಠರ ತೀರ್ಮಾನದ ಮೇಲೆ ನಾವು ಕೂಡಾ ಮುಂದುವರೆಯುತ್ತೆವೆ. ಅಲ್ಲದೆ ವಿಧಾನ ಸಭಾ ಚುನಾವಣೆ ಇನ್ನುಇ ಸಾಕಷ್ಟು ದೂರವಿದೆ ಹಾಗಾಗಿ ಈಗಲೆ ಅದ ಬಗ್ಗೆ ಯಾವ ಚರ್ಚೆಗಳು ನಡೆದಿಲ್ಲ ಎಂದು ತಿಳಿಸಿದರು.

ಹು-ಧಾ ಪಾಲಿಕೆಯಲ್ಲಿ 60 ಸ್ಥಾನ ಗೆಲ್ಲುತ್ತೇವೆ:

82 ಸ್ಥಾನಗಳಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತೇವೆ. ಟಿಕೆಟ್ ಆಕ್ಷಾಂಕಿಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. 700 ಕ್ಕೂ ಹೆಚ್ಚು ಜನರು ಆಕ್ಷಾಂಕಿಗಳು ಇದ್ದರು. ಕೆಲವು ಕಡೆ ಬಂಡಾಯಗಾರರ ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ದ ಈಗಾಗಲೇ ಕ್ರಮ‌ಕೈಗೊಂಡಿದ್ದೇವೆ. ಬಂಡಾಯಗಾರರಿಗೆ ಜನರು ಬೆಂಬಲ ನೀಡುವುದಿಲ್ಲ. ಬೆಲೆ ಏರಿಕೆ ಬೇರೆ ಬೇರೆ ಸರ್ಕಾರ ಇದ್ದಾಗಲೂ ಆಗಿದೆ. ಬೆಲೆ ಏರಿಕೆ ಈ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಕೆಲವು ಅಭ್ಯರ್ಥಿಗಳಿ ಜೈಲಿನಿಂದ ಧಮ್ಕಿ ಹಾಕಿರುವ ಕುರಿತು ಮಾಹಿತಿ ಬಂದಿದೆ. ಆದರೆ ಅದ ಬಗ್ಗೆ ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕು, ಈಗಾಗಲೇ ತೆಗೆದುಕೊಂಡಿದ್ದೇವೆ‌. ಜೊತೆಗೆ ನಮ್ಮ ಪಕ್ಷದ ಪಾಲಿಕೆ ಅಭ್ಯರ್ಥಿಗಳಿಗೆ ಹಾಗೂ ಕಾರ್ಯಕರ್ತರಿಗೆ ವಿಶ್ವಾಸ ತುಂಬುವ ಕೆಸವನ್ನೂ ಕೂಡಾ ಮಾಡಲಾಗಿದೆ. ಗುಂಡಾಗಿರಿ ಹಾಗೂ ದಮ್ಕಿ ಹಾಕುವುದೆಲ್ಲ ಜನರ ಶಕ್ತಿಯ ಮುಂದೆ ಎನು ನಡೆಯುವುದಿಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button