Breaking Newsಇತರ ಕ್ರೀಡೆಕ್ರೀಡೆ
Tokyo Paralympics: ಅವನಿ ಲೆಖಾರ್ಗೆ ಎರಡನೇ ಪದಕ: ಶೂಟಿಂಗ್ ನಲ್ಲಿ ಕಂಚು

ಟೋಕಿಯೋ : ಅವನಿ ಲೆಖಾರ ಭಾರತಕ್ಕೆ ಮತ್ತೊಂದು ಪದಕದ ಉಡುಗೊರೆ ನೀಡಿದ್ದಾರೆ. 10 ಮೀ. ಏರ್ ಪಿಸ್ತೂಲ್ ನಲ್ಲಿ ಚಿನ್ನ ಗೆದ್ದಿದ್ದ ಅವನಿ ಈಗ 50 ಮೀ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಅವನಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಒತ್ತಡಗಳನ್ನು ಮೀರಿ ಯಶಸ್ಸಿನ ಹಾದಿ ತುಳಿದ ಅವನಿ 30 ಶೂಟ್ ಗಳ ವರೆಗೂ ಫೈನಲ್ ಹಂತದಲ್ಲಿ 6ನೇ ಸ್ಥಾನಲ್ಲಿದ್ದು, ಪದಕದ ಆಸೆಯಿಂದ ದೂರ ಉಳಿದಿದ್ದರು. ಆದರೆ ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ. ನಂತರದ 13 ಶೂಟ್ ಗಳಲ್ಲಿ ಯಶಸ್ಸು ಕಂಡ ಅವನಿ 0.2 ಅಂತರದಲ್ಲಿ ನಾಲ್ಕನೇ ಸ್ಥಾನದಿಂದ ಹಿಂದುಳಿದಿದ್ದರು. ಆದರೆ, ಅಂತಿಮ ಹಂತದಲ್ಲಿ ಗಳಿಸಿದ 10.5 ಅಂಕಗಳು ಅವನಿಗೆ ಐತಿಹಾಸಿಕ ಪದಕ ತಂದುಕೊಟ್ಟಿತು.
ಭಾರತಕ್ಕೆ ಈ ದಿನದ ಎರಡನೇ ಪದಕ ಇದಾಗಿದೆ. ಈಗಾಗಲೇ ಬ್ಯಾಡ್ಮಿಂಟನ್ ನಲ್ಲಿ ಐವರು ಸ್ಪರ್ಧಿಗಳು ಫೈನಲ್ ಪ್ರವೇಶಿಸಿದ್ದಾರೆ.
