ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟಕ ಬಳಕೆಯಿಂದ ಮನೆಗಳ ಗೋಡೆ ಬಿರುಕು; ರೈತರಿಂದ ಪ್ರತಿಭಟನೆ

ದೇವನಹಳ್ಳಿ: ತಾಲ್ಲೂಕಿನ ತೈಲಗೆರೆ ಗ್ರಾಮದ ಸರ್ವೆ ನಂ. 110ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಜನರ ನೆಮ್ಮದಿಗೆ ಭಂಗವಾಗುತ್ತಿದೆ. ಮನೆಗಳು ಬಿರುಕು ಬಿಟ್ಟಿದ್ದು, ರಸ್ತೆಗಳು ಹಾಳಾಗಿವೆ. ಬೆಳೆ ನಾಶವಾಗಿದೆ ಎಂದು ಆರೋಪಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು ಈ ಸಂದರ್ಭದಲ್ಲಿ ರೈತರು ಗಣಿಗಾರಿಕೆಯ ಸ್ಪೋಟದ ಪರಿಣಾಮ ಗ್ರಾಮದಲ್ಲಿ ಮನೆಗಳು ಬಿರುಕು ಬಿಡುತ್ತಿದೆ ಮತ್ತು ಬೆಳೆಗಳ ಮೇಲೆ ದೂಳಿನ ಕಣಗಳು ಗಾಳಿಯಲ್ಲಿ ಬಂದು ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿದೆ ಎಂದು ತಮ್ಮ ಅಳಲು ನೋಡಿಕೊಂಡರು.
ಅಧಿಕಾರಿಗಳ ಮುಂದೆಯೇ ರೈತರು ಮತ್ತು ಗಣಿಗಾರಿಕೆ ಕೆಲಸ ಮಾಡುವ ಕಾರ್ಮಿಕರ ಮಧ್ಯೆ ವಾಗ್ವಾದ ಉಂಟಾಯಿತು ಗಣಿ ಮಾಲಿಕರಿಗೆ ರೈತರು ದಿಗ್ಬಂಧನ ವಿಧಿಸಿದರು.
ರೈತರ ದೂರನ್ನು ಆಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಡಾ ಲಕ್ಷ್ಮಮ್ಮ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಣ್ಣಗಾಯಿತು.




