
ಮುಂಬಯಿ : 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಉಳಿದ ಪಂದ್ಯಗಳು ಸೆ.19 ರಿಂದ ಯುಎಇ ಯಲ್ಲಿ ಆರಂಭಗೊಳ್ಳಲಿದ್ದು, 2022 ರ ಋತುವಿನ ಬಗ್ಗೆ ಮಾತುಕತೆ ನಡೆದಿದೆ.
2022ರಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುತ್ತಿದ್ದು, ಒಟ್ಟು 10 ತಂಡಗಳ ನಡುವೆ 74 ಪಂದ್ಯಗಳು ನಡೆಯಲಿವೆ. ಅಹಮದಾಬಾದ್, ಪುಣೆ ಅಥವಾ ಲಖನೌ ಮೂಲದ ತಂಡಗಳು ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ಫ್ರಾಂಚೈಸಿಯ ಮೂಲ ಬೆಲೆಯನ್ನು 2 ಸಾವಿರ ಕೋಟಿ ರೂ.ಗಳೆಂದು ಬಿಸಿಸಿ ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ 2021 ನೇ ಋತುವಿನ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.




