ಜಿಲ್ಲಾ ಸುದ್ದಿದಾವಣಗೆರೆ

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ದಾವಣಗೆರೆಯ ಪೋರ…!

ದಾವಣಗೆರೆ: ಆ ಬಾಲಕನಿಗೆ ಇನ್ನು ಕೇವಲ ಎರಡೂವರೆ ವರ್ಷ. ಏನೇ ಕೇಳಿದ್ರು ಥಟ್ಟಂತ ಹೇಳ್ತಾನೆ. ಆತನ ಸ್ಮರಣಾ ಶಕ್ತಿಗೆ ನೀವು ತಲೆದೂಗುವುದು ಖಚಿತ. ಅಷ್ಟು ಅಪಾರ ಜ್ಞಾನವುಳ್ಳ ಈ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ.

ಗಿನ್ನಿಸ್ ದಾಖಲೆ ಬರೆದ ಈ ಬಾಲಕನ ಹೆಸರು ಸಮರ್ಥ್. ದಾವಣಗೆರೆಯ ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ಉಮಾಶಂಕರ್ ಹಾಗೂ ನವ್ಯಾ ದಂಪತಿ ಪುತ್ರ ಸಮರ್ಥ್.

ಮೊಬೈಲ್ ನಲ್ಲಿ ಒಮ್ಮೆ ತೋರಿಸಿದರೆ ಸಾಕು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಬಳಿಕ ಕೇಳಿದರೆ ಹರಳು ಉರಿದಂತೆ ಮಾತನಾಡುತ್ತಾನೆ. ಅಲ್ಲದೇ ತಂದೆ ತಾಯಿ ಯಾವುದೇ ವಿಷಯ ಹೇಳಿಕೊಟ್ಟರೆ ನೆನಪಿನಲ್ಲಿ ಇಟ್ಟುಕೊಳ್ಳುವಷ್ಟು ಜ್ಞಾಪಕ ಶಕ್ತಿ ಹೊಂದಿದ್ದಾನೆ. ನ್ಯಾಷನಲ್ ಬರ್ಡ್ಸ್, ಅನಿಮಲ್, ನ್ಯಾಷನಲ್ ಟ್ರೀ, ರಾಜ್ಯಗಳ ಹೆಸರು, 40 ಪ್ರಾಣಿಗಳ ಹೆಸರು, 14 ದೇಶಗಳ ಕರೆನ್ಸಿ, ಹಲವು ಬಣ್ಣಗಳು ಗುರುತಿಸುವ ಈ ಪುಟಾಣಿ ಈಗ ಎಲ್ಲರ ಕೇಂದ್ರ ಬಿಂದುವಾಗಿದ್ದಾನೆ.

ಸಂಬಂಧಿಕರ ಸಲಹೆ ಮೇರೆಗೆ ಈತನ ವೀಡಿಯೋಗಳನ್ನು ಸಮರ್ಥ್ ತಾಯಿ ನವ್ಯಾ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಕಳಿಸಿದ್ದಾರೆ‌. ಅದಕ್ಕೆ ಸಮ್ಮತಿ ವ್ಯಕ್ತಪಡಿಸಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮೆಚ್ಚುಗೆ ಪತ್ರ ಕಳುಹಿಸಿದ್ದು, ಅದು ಈಗ ಪೋಷಕರ ಕೈ ಸೇರಿದೆ.

ಸಮರ್ಥ್ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಆತನ ಸ್ಮರಣಾ ಶಕ್ತಿಗೆ ಎಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮರ್ಥ್ ಸಾಧನೆ ಮಾಡುವ ಜೊತೆಗೆ ದಾವಣಗೆರೆಗೆ ಕೀರ್ತಿ ತಂದಿದ್ದಾನೆ. ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ತಮ್ಮ ಪುತ್ರ ಸೇರಿದ್ದು ಪೋಷಕರಿಗೆ ಖುಷಿ ತಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button