Breaking NewsLatestಇತರ ಕ್ರೀಡೆಕ್ರೀಡೆ

Tokyo Paralympics: ಐತಿಹಾಸಿಕ ಬೆಳ್ಳಿ ಗೆದ್ದ ಭಾವಿನಾ ಪಾಟೀಲ್

ಟೋಕಿಯೋ : ವಿಶ್ವದ ನಂ.1 ಆಟಗಾರ್ತಿ ಚೀನಾದ ಝೂ ಯಿಂಗ್ ವಿರುದ್ಧ ಫೈನಲ್ ಪಂದ್ಯದಲ್ಲಿ 0-3 ಅಂತರದಲ್ಲಿ ಸೋಲನುಭವಿಸಿದ ಭಾರತದ ಭಾವಿನಾ ಪಟೇಲ್ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ.

ಫೈನಲ್ ತಲಪುವುದಕ್ಕೆ ಮುನ್ನ ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿದ ಭಾವಿನಾ ಫೈನಲ್ ನಲ್ಲಿ 5-11, 7-12, 6-11 ಅಂತರದಲ್ಲಿ ಜಗತ್ತಿನ ನಂ.1 ಆಟಗಾರ್ತಿಗೆ ಶರಣಾದರು.
ಆದರೆ ಭಾವಿನಾ ಅವರ ಈ ಸಾಧನೆ ಭಾರತೀರ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಟೇಬಲ್ ಟೆನಿಸ್ ನಲ್ಲಿ ಇದು ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ.

ಇವತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ನಡೆದ ಇತರ ಪಂದ್ಯಗಳಲ್ಲಿ ಮಹಿಳಾ ಆರ್ಚರಿ ವಿಭಾಗದಲ್ಲಿ ಜ್ಯೋತಿ ಬಾಲಿಯಾನ್ ಅವರು ವೈಯಕ್ತಿಕ ಕಾಂಪೌಂಡ್ ಓಪನ್ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಜ್ಯೋತಿ ಬಾಲಿಯಾನ್ ಮತ್ತು ರಾಕೇಶ್ ಕುಮಾರ್ ಅವರು ಇಂದು ಸ್ಪರ್ಧಿಸುತ್ತಿದ್ದಾರೆ. ಪುರುಷರ ವಿಭಾಗದಲ್ಲಿ ಮೂವರು ಭಾರತೀಯರು ಇನ್ನೂ ಕಣದಲ್ಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button