Breaking Newsಜಿಲ್ಲಾ ಸುದ್ದಿಬೆಳಗಾವಿರಾಜಕೀಯ

ಸಿಎಂ ಬೆನ್ನು ಬಿಡದ ಜಾರಕಿಹೊಳಿ ಸಹೋದರರು: ದೆಹಲಿಯಲ್ಲಿ ಮತ್ತೊಮ್ಮೆ ಮೀಟಿಂಗ್

ಬೆಳಗಾವಿ : ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನಲೆಯಲ್ಲಿ ಜಾರಕಿಹೊಳಿ ಅಂಡ್ ಟೀಮ್ ಮತ್ತೆ ಮಂತ್ರಿಗಿರಿ ಪಡೆಯುವ ತನ್ನ ಪ್ರಯತ್ನ ಬಿಡುತ್ತಿಲ್ಲಾ. ಈ ಬಗ್ಗೆ ನಿರಂತರ ಒತ್ತಡ ಹೇರುತ್ತಿರುವ ಜಾರಕಿಹೊಳಿ ಬ್ರದರ್ಸ್ ಕಳೆದ ದಿನ ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ

ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಅವರ ಬೆಂಬಲಿಗ ಶಾಸಕರಾದಂತಹ ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಬುಧವಾರ ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸಿಎಂ ಜೊತೆ ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಪಾತ್ರ ಪ್ರಮುಖವಾಗಿದೆ. ಇವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದು ನಮ್ಮ ಹೋರಾಟವಾಗಿದೆ ಎಂದರು.

ಆದರೆ, ಸಿಎಂ ಅಥವಾ ಹೈಕಮಾಂಡ್ ಭೇಟಿಯಾಗಲೆಂದೇ ದೆಹಲಿಗೆ ಬಂದಿಲ್ಲ. ಬೇರೆ ಕೆಲಸದ ನಿಮಿತ್ಯ ದೆಹಲಿಗೆ ಬಂದಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಈ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button