Breaking Newsಜಿಲ್ಲಾ ಸುದ್ದಿಮಂಡ್ಯ
KRS ಡ್ಯಾಂ ವೀಕ್ಷಿಸಿದ ಮಠಾಧೀಶರು

ಮಂಡ್ಯ: ಆದಿ ಚುಂಚನಗಿರಿ ಶ್ರೀ ಕ್ಷೇತ್ರದ ನಿರ್ಮಲಾನಂದ ಸ್ವಾಮೀಜಿ , ಗುಜರಾತ್ ನ. ರಮಾನಂದ ಸ್ವಾಮೀಜಿ ಸೇರಿ ಶಾಖಾಮಠದ ಹಲವು ಸ್ವಾಮೀಜಿಗಳು ಸುಪ್ರಸಿದ್ದ
ಕೆ.ಆರ್.ಎಸ್. ಅಣೆಕಟ್ಟೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಸ್ವಾಮೀಜಿಗಳಿಗೆ ಡ್ಯಾಂ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು. ಡ್ಯಾಂನಲ್ಲಿ ಕಾವೇರಿ ಮಾತೆಗೆ ನಮಿಸಿ ಡ್ಯಾಂ ಮತ್ತು ಬೃಂದಾವನ ಸೌಂದರ್ಯವನ್ನು ಕಂಣ್ತುಂಬಿಕೊಂಡ ಸ್ವಾಮೀಜಿಗಳು, ಬೇಗನೆ ಡ್ಯಾಂ ತುಂಬಿ ಹರಿಯಲಿ ಎಂದು ಪ್ರಾರ್ಥನೆ ಮಾಡಿದರು.
