ಕೊರೊನಾ ನಿಯಮ ಗಾಳಿಗೆ ತೂರಿ ನಾಮಪತ್ರ ಸಲ್ಲಿಕೆ; ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಂದಲೇ ನಿಯಮ ಉಲ್ಲಂಘನೆ

ಧಾರವಾಡ : ಕಳೆದ ಎರಡು ವರ್ಷಗಳಿಂದ ಹಾಗೇ ಉಳಿದುಕೊಂಡಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಈಗಾಗಲೇ ಮತದಾನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಈಗ ಪಾಲಿಕೆ ಮುಂಭಾಗದಲ್ಲಿ ಜನ ಜಾತ್ರೆಯೇ ಕಂಡು ಬರುತ್ತಿದ್ದೆ. ಇಂದು ನಾಮ ಪತ್ರ ಸಲ್ಲಿಕೆಯ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆಗೆ ಮುಂದಾಗಿದ್ದು, ಆದರೆ ಇಲ್ಲಿ ಸಂಪೂರ್ಣವಾಗಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿಲಾಗಿದೆ.
ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಪಾಲಿಕೆಗೆ ನಾಮ ಒತ್ರ ಸಲ್ಕಿಸಲು ಆಗಮಿಸುತ್ತಿದ್ದು, ಇದರಿಂದಾಗಿ ಹುಬ್ಬಳ್ಳಿಯ ಪಾಲಿಕೆ ಬಳಿಯಲ್ಲಿ ಜನ ಜಾತ್ರೆ ಕಂಡು ಬರುತ್ತಿದೆ. ಸಮಾಜಿಕ ಅಂತರ, ಮಾಸ್ಕ್‌ಗಳನ್ನು ಹಾಕದೇ ಅಭ್ಯರ್ಥಿಗಯ ಬೆಂಬಲಿಗರು ಪಾಲಿಕೆ ಮುಂಭಾಗದಲ್ಲಿ ನೇರೆದಿದ್ದು, ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಕೂಡಾ ಹರಸಾಹಸ ಪಡಬೇಕಾಗಿದೆ. ನಾಮ ಪತ್ರ ಸಲ್ಲಿಕೆಗೆ ಅಭ್ಯರ್ಥಿಯ ಜೊತೆಗೆ ಐದು ಜನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಆದರೆ ಅಭ್ಯರ್ಥಿಗಳು ನೂರಾರು ಬೆಂಬಲಿಗರೊಂದಿಗೆ ಆಗಮಿಸುತ್ತಿರುವದು. ಈಗ ಪಾಲಿಕೆಯ ಅಧಿಕಾರಿಗಳಿಗೆ ಹಾಗೂ ಪೊಲೀಸರ ಇಲಾಖೆಗೆ ಇನ್ನಿಲ್ಲದ ಸಮಸ್ಯೆ ತಂದೊಡ್ಡುತ್ತಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಸುಮಾರು ಮೂವತ್ತಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಹುಬ್ಬಳ್ಳಿಯ ಪಾಲಿಕೆಯ ಆವರಣದಲ್ಲಿ ನಾಮ ಪತ್ರ ಸಲ್ಲಿಸಲು ಮುಂದಾಗಿದ್ದು, ಇದರಿಂದಾಗಿ ಪಾಲಿಕೆ ಆವರಣ ಅಷ್ಟೇ ಅಲ್ಲದೆ, ಮಂಭಾಗದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡು ಸ್ಥಿತಿ ಪಾಲಿಕೆಯ ಮುಂಭಾಗದ ರಸ್ತೆಯಲ್ಲಿ ಉಂಟಾಗಿದೆ. ಕೊರೊನಾ 3ನೇ ಅಲೆಯ ನಡುವೆಯು ಪಾಲಿಕೆಯ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಮುಂದೆ ಕೊರೊನಾ ನಿಯಮ ಬ್ರೆಕ್ ಆಗುತ್ತಿದ್ದರು. ತಲೆ ಮೇಕೆ ಕೈ ಹೊತ್ತು ಕೂರುವ ಸ್ಥತಿ ಅಧಿಕಾರಿಗಳಿಗೆ ಬಂದಿದೆ.
