ಕೊಡಗುಜಿಲ್ಲಾ ಸುದ್ದಿ

ಕೊಡಗಿನ ಕುಂದಾ ಬೆಟ್ಟದಲ್ಲಿನ ದೇವಸ್ಥಾನಕ್ಕೆ ಕಿಡಿಗೇಡಿಗಳಿಂದ ಹಾನಿ

ಕೊಡಗು : ಪೊನ್ನಂಪೇಟೆ ತಾಲೂಕು ಬೊಟ್ಯತ್‌ ನಾಡಿಗೆ ಸೇರುವ ಕುಂದ ಬೆಟ್ಟ ಎಂದು ಹೆಸರುವಾಸಿಯಾಗಿರುವ ಪವಿತ್ರ ಪುಣ್ಯಕ್ಷೇತ್ರದಲ್ಲಿ ಒಂದಾಗಿರುವ ಕುಂದಾಬೆಟ್ಟದ ತುದಿಯಲ್ಲಿರುವ ಬೊಟ್ಲಪ್ಪ (ಬೆಟ್ಟದ ಮಹಾದೇವ) ದೇವಸ್ಥಾನಕ್ಕೆ ಯಾವುದೊ ಕಿಡಿಗೇಡಿಗಳು ಹಾನಿಯುಂಟ ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಈ ಹಿಂದೆ ಪಾಡವರು ಅಜ್ಞಾತ ವಾಸದಲ್ಲಿದ್ದಾಗ ಪಾಂಡವರೇ ಕಲ್ಲಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುವ ಬೊಟ್ಲಪ್ಪ ದೇಗುಲದ ಮೇಲ್ಚಾವಣಿಯ ನಾಲ್ಕು ತುದಿಗಳಲ್ಲಿ ಅಳವಡಿಸಲಾದ ಒಂದು ಬಸವ ವಿಗ್ರಹಕ್ಕೆ ಹಾನಿಯುಂಟು ಮಾಡಿರುವ ದುಷ್ಕರ್ಮಿಗಳು ಬಸವ ವಿಗ್ರಹದ ತಲೆಯನ್ನು ಕೆಳಗೆ ಉರುಳಿಸಿದ್ದಾರೆ. ಊರಿನ ವ್ಯಕ್ತಿಯೊಬ್ಬರು ಬೆಟ್ಟದ ದೇವಸ್ಥಾನಕ್ಕೆ ಎಂದಿನಂತೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ತಕ್ಕಮುಖ್ಯಸ್ಥರು ಹಾಗೂ ಊರಿನವರು ಸೇರಿ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಜಯರಾಂ ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳದಲ್ಲಿ ಕತ್ತಿಯೊಂದು ದೊರೆತಿದೆ ಹಾಗೂ ತನಿಖೆ ಮುಂದುವರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button