ದಶಪಥ ಹೆದ್ದಾರಿ ಕಾಮಗಾರಿ ಯೋಜನೆಗಳು ಯುಪಿಎ ಸರ್ಕಾರದ ಕೊಡುಗೆ: ಹೆಚ್ ವಿಶ್ವನಾಥ್

ಮೈಸೂರು: ದಶಪಥ ಹೆದ್ದಾರಿ ಕಾಮಗಾರಿ ಯೋಜನೆಗಳು ಅಂದಿನ ಯುಪಿಎ ಸರ್ಕಾರದ ಕೊಡುಗೆ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ – ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಗಳು ಅಂದಿನ ಯುಪಿಎ ಸರ್ಕಾರದ ಕೊಡುಗೆಗಳಾಗಿವೆ. ಆಗ ಕೇಂದ್ರದಲ್ಲಿ ಯುಪಿಎ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿತ್ತು. ಆಗ ಅನುಮೋದನೆ ಆಗಿರುವ ಯೋಜನೆಗಳ ಶ್ರೇಯಸ್ಸು ಅಂದಿನ ಸರ್ಕಾರಗಳಿಗೆ ಸಲ್ಲಬೇಕು. 10 -12 ವರ್ಷಗಳ ಹಿಂದೆ ಆಗಿರುವ ಯೋಜನೆಗಳನ್ನು ನಾನು ಮಾಡಿದೆ ಎಂದು ಸುಳ್ಳು ಹೇಳಬಾರದು ಎಂದು ಪ್ರತಾಪ ಸಿಂಹಗೆ ತಿರುಗೇಟು ನೀಡಿದ್ದಾರೆ.
ಇದು ಪ್ರತಾಪ್ ಸಿಂಹ ಕೆಲಸವಲ್ಲ, ಯುಪಿಎ ಸರ್ಕಾರದ ಸಾಧನೆ. ಪ್ರತಾಪ ಸಿಂಹ ಹೊಸದಾಗಿ ಏನನ್ನಾದರೂ ಮಾಡಲಿ. ಸುಮ್ಮನೆ ಅನಾವಶ್ಯಕವಾಗಿ ಇದನ್ನು ನಾನು ಮಾಡಿದೆ ಎಂದು ಹೇಳಬಾರದು. ನೀವು ಸಂಸದರಾದ ಆದ ನಂತರ ಈ ಯೋಜನೆ ಬಂದಿಲ್ಲ. ನಾನು ಹಾಗೂ ಆಗ ಸಂಸದರಾಗಿದ್ದ ಧ್ರುವನಾರಾಯಣ್, ರಮ್ಯ ಇದ್ದಾಗ ಬಂದ ಯೋಜನೆ. ಉಂಡುವಾಡಿ ಯೋಜನೆಯನ್ನು ಸಹ ನೀವು ತಂದಿದ್ದಲ್ಲ. ಪ್ರತಾಪಸಿಂಹ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
