ಬೆಳಗಾವಿ
ಜೀವನದಲ್ಲಿ ಹೇಗಿರಬೇಕು ಎಂಬ ಪಾಠ ಕಲಿತಿದ್ದೇನೆ; ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ ಪ್ರತಿಕ್ರಿಯೆ

ಬೆಳಗಾವಿ: ಯೋಗೀಶ್ ಗೌಡ ಹತ್ಯೆ ಕೇಸ್ ನಲ್ಲಿ ಜಾಮೀನಿನ ಮೂಲಕ ಬಿಡುಗಡೆಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಿಂದ ಹೊರಬಂದಿದ್ದು, ಜೀವನದಲ್ಲಿ ಹೇಗಿರಬೇಕು ಎಂಬ ಪಾಠ ಕಲಿತಿದ್ದೇನೆ ಎಂದಿದ್ದಾರೆ.
ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ, ಜೈಲಿನಲ್ಲಿದ್ದಾಗ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ನನಗೆ ಪುಸ್ತಕ ಓದುವ ಅಭ್ಯಾಸವೇ ಇರಲಿಲ್ಲ. ಜೈಲಿನಲ್ಲಿ ಪುಸ್ತಕ ಓದುವುದನ್ನು ಕಲಿತೆ. ಮುಂಬರುವ ಜೀವನದಲ್ಲಿ ಹೇಗಿರಬೇಕೆಂಬ ಪಾಠ ಕಲಿತಿದ್ದೇನೆ ಎಂದರು.
ನಾನು ನಿರ್ದೋಷಿಯಾಗಿ ಹೊರಗೆ ಬರುತ್ತೇನೆ ಎಂಬ ವಿಶ್ವಾಸವಿತ್ತು. ನನ್ನ ಮೇಲೆ ನಂಬಿಕೆ ಇಟ್ಟು ಸುಪ್ರೀಂ ಕೋರ್ಟ್ ನನಗೆ ಜಾಮೀನು ನೀಡಿದೆ. ಶೀಘ್ರದಲ್ಲಿಯೇ ಪ್ರಕರಣದಿಂದ ಹೊರಬರುತ್ತೇನೆ. ನಾನು ಉಳಿದ ರಾಜಕಾರಣಿಗಳಂತಲ್ಲ. ಮೂಲತ: ನಾನೋರ್ವ ರೈತ ಕುಟುಂಬದವನು ಎಂದು ಹೇಳಿದರು.




