ಕಲಬುರ್ಗಿಜಿಲ್ಲಾ ಸುದ್ದಿ

ಕಲಬುರ್ಗಿ ಜಿಲ್ಲೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಡಗರ

ಕಲಬುರ್ಗಿ: ಶ್ರಾವಣ ಮಾಸದ ಎರಡನೇ ಶುಕ್ರವಾರವಾದ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಣೆ ಮಾಡಲಾಯಿತು.

ಕಲಬುರಗಿ ನಗರದ ಪ್ರತಿಯೊಬ್ಬರ ಮನೆಗಳಲ್ಲಿಯೂ ತಾಯಿ ವರಮಹಾಲಕ್ಷ್ಮಿಯ ವೈಭವ ಜೋರಾಗಿದೆ. ವಿಶೇಷವಾಗಿ ಮಹಾಲಕ್ಷ್ಮಿ ನಗರದ ಲಕ್ಷ್ಮೀಕಾಂತ್ ತಡಕಲ್ ಅವರ ಮನೆಯಲ್ಲಿ ಇಡೀ ಬಡಾವಣೆಯ ಮಹಿಳೆಯರೆಲ್ಲಾ ಸೇರಿ ವಿಶೇಷವಾಗಿ ಅಲಂಕಾರ ಮಾಡಿ ದೇವಿಗೆ ಪೂಜೆ ಸಲ್ಲಿಸುವದರ ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ಸಮೃದ್ಧಿ, ಏಳಿಗೆ ಹಾಗೂ ಸಂಪತ್ತಿನ ಸಂಕೇತವಾದ ವರಮಹಾಲಕ್ಷ್ಮಿಯನ್ನು ಮಹಿಳೆಯರು ದೇವರಿಗೆ ಹೂವು, ಹಣ್ಣಿನ ನೈವೇದ್ಯ ಅರ್ಪಿಸಿ ಭಕ್ತಿ ಸರ್ಮಪಿಸಿದರು. ನಂತರ ಸುಮಂಗಲಿಯರೆಲ್ಲ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡು ನಾಡಿಗೆ ಒಳಿತನ್ನು ಮಾಡಲಿ ಅಂತ ಪ್ರಾರ್ಥಿಸಿದ್ರು.

ಅಲಂಕಾರಪ್ರಿಯೆ ಮಹಾಲಕ್ಷ್ಮಿಯಗೆ ನಾರಿಯರು ವಿವಿಧ ಹಣ್ಣು-ಹಂಪಲು ಒಡವೆಗಳಿಂದ ಅಲಂಕರಿಸಿದರು. ಸಿಹಿ ತಯಾರಿಕೆ ದೇವಿಗೆ ನೈವೇದ್ಯ ಮೂಲಕ ಅತ್ಯಂತ ವಿಜೃಂಭಣೆಯಿಂದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ನಾಡಿನ ಏಳಿಗೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿ ಹಬ್ಬವನ್ನು ಸಂಭ್ರಮಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button