ಬೆಳಗಾವಿ
ಆರು ಎಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದು; ವಿದ್ಯಾರ್ಥಿಗಳಿಗೆ ಬೇರೆಡೆ ಪ್ರವೇಶ

ಬೆಳಗಾವಿ: ರಾಜ್ಯದ 6 ಎಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದುಪಡಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, 2021 -22ನೇ ಸಾಲಿನಿಂದ ಈ ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದೆ.
ಈ ಕುರಿತು ವಿಟಿಯು ಪ್ರಕಟಣೆ ಹೊರಡಿಸಿದೆ. ಅಲ್ಫಾ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಂಗಳೂರು, ಶೇಖ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಳಗಾವಿ, ಇಸ್ಲಾಮಿಯಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು, ಏಕಲವ್ಯ ಇನ್ ಸ್ಟಿಟ್ಟೂಟ್ ಆಫ್ ಟೆಕ್ನಾಲಜಿ, ಚಾಮರಾಜ ನಗರ, ಶ್ರೀ ವಿನಾಯಕ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆಜಿಎಫ್, ಬಿಟಿಎಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ ಮೆಂಟ್ ಬೆಂಗಳೂರು ಇವು 2021- 22ನೇ ಸಾಲಿಗೆ ಮಾನ್ಯತೆ ಇಲ್ಲದ ಕಾಲೇಜುಗಳು.




