ಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರ

ಪ್ರಸಾದ ಕೇಳಿದ ಬಾಲಕನಿಗೆ ತಳ್ಳಿ ಗಾಯ; ಪ್ರಶ್ನಿಸಿದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕಿನ ರಾಮನಾಥಪುರದಲ್ಲಿ ದಲಿತ ಕುಟುಂಬದ 8 ವರ್ಷದ ಬಾಲಕ ಗ್ರಾಮದ ಉತ್ಸವದಲ್ಲಿ ಪ್ರಸಾದ ಕೇಳಿದ್ದಕ್ಕೆ ಬಾಲಕನನ್ನು ತಳ್ಳಿ ಗಾಯಗೊಳಿಸಿದ್ದನ್ನು ಪ್ರಶಿಸಿದ್ದಕ್ಕೆ ಇಡೀ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ವಿಶ್ವನಾಥಪುರ ಪೋಲಿಸ್ ಠಾಣೆಯ ರಾಮನಾಥಪುರದಲ್ಲಿ ನಡೆದಿದೆ.

ಸರ್ಕಾರಿ ಶಾಲಾ ಶಿಕ್ಷಕರಾಗಿರುವ ಮುನಿ ಆಂಜನಪ್ಪ ಮತ್ತು ಅವರ ಪತ್ನಿ ಆಶಾ ಕಾರ್ಯಕರ್ತೆ ಅರುಣಾ ಎಂಬ ದಂಪತಿಯ 8 ವರ್ಷದ ಮಗ ಗ್ರಾಮದ ಉತ್ಸವದಲ್ಲಿ ಪ್ರಸಾದ ಕೇಳಿದ್ದಕ್ಕೆ ಕಿಶೋರ್ ಎಂಬಾತ ಬಾಲಕನನ್ನು ತಳ್ಳಿ ಕಾಲಿಗೆ ಗಾಯಗೊಳಿಸಿದ್ದ.

ಮಗುವನ್ನು ತಳ್ಳಿ ಗಾಯಗೊಳಿಸಿದ್ದರ ಬಗ್ಗೆ ಮಾರನೆಯ ದಿನ ಬಾಲಕನ ತಾಯಿ ಅರುಣಾ ಅವರು ಕೇಳಿದ್ದಕ್ಕೆ ಕಿಶೋರ್ ಎಂಬಾತ ಅರುಣಾ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾನೆ, ಆಗ ಅರುಣಾ ಅವರು ಕಿರುಚಿಕೊಂಡಾಗ ಹತ್ತಿರದಲ್ಲೇ ಇದ್ದ ಮನೆಯಿಂದ ಮುನಿಆಂಜನಪ್ಪ ಅವರು ಮನೆಯಿಂದ ಓಡಿ ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಕಿಶೋರ್‌ ನನ್ನು ತಡೆದಾಗ ಆತ ವೆಂಕಟೇಶ್ ಮತ್ತು ಮಂಜುನಾಥ ಎಂಬ ತನ್ನ ಸಂಗಡಿಗರನ್ನು ಪೋನ್ ಮಾಡಿ ಕರೆಸಿಕೊಂಡು ಮುನಿ ಆಂಜನಪ್ಪ ಮತ್ತು ಅವರ ಪತ್ನಿಯನ್ನು ಮೂವರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬವು ಆರೋಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ ಆಗಷ್ಟ್ 16 ರಂದು ದೂರು ದಾಖಲಿಸಿದ್ದರು ಪೋಲಿಸರು ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಚಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ ಮತ್ತು ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆಜಿ ಶ್ರೀನಿವಾಸ್ ಬಿಎಸ್ಎಸ್ ನ ಸಿದ್ದರಾಜು ಆರೋಪಿಸಿದ್ದಾರೆ. ಶಿಕ್ಷಕರಾದ ಮುನಿಆಂಜನಪ್ಪ ಅವರ ಕುಟುಂಬಕ್ಕೆ ಆರೋಪಿಗಳಿಂದ ಪ್ರಾಣ ಬೆದರಿಕೆ ಇದ್ದು ಅದ್ದರಿಂದ ಕೂಡಲೇ ಪೋಲಿಸರು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button