ಬಾಗಲಕೋಟೆ

ಕೋವಿಡ್ ನಡುವೆ ಅನುಮತಿ ಪಡೆಯದೇ ಸಿಎಫ್​ಐ ಸದಸ್ಯತ್ವ ಅಭಿಯಾನ; ಕಾರ್ಯಕರ್ತರ ಬಂಧನ

ಬಾಗಲಕೋಟೆ: ಕೋವಿಡ್ ಮೂರನೇ ಅಲೆ ಭೀತಿ ಮಧ್ಯೆ ಅನುಮತಿಯಿಲ್ಲದೆ ಸಿಎಫ್ ಐ ಕಾರ್ಯಕರ್ತರ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.

ಜಮಖಂಡಿಯಲ್ಲಿ CFI ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ವಶಕ್ಕೆ ಪಡೆದಿದ್ದು,.ಸದಸ್ಯತ್ವ ಅಭಿಯಾನ ಉದ್ಘಾಟನೆ ಸಂದರ್ಭದಲ್ಲಿ
ಸಿಎಫ್ ಐ ರಾಜ್ಯ ನಾಯಕರ ಬಂಧಿಸಲಾಗಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸದಸ್ಯತ್ವ ಅಭಿಯಾನ ಉಧ್ಘಾಟನಾ ಸಮಾರಂಭವನ್ನು ಅನುಮತಿಯಿಲ್ಲದೆ ಆಯೋಜಿಸಿದ್ದರು.

ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಬಂಧಿಸಿದ್ದಾರೆ. ವಿದ್ಯಾರ್ಥಿಗಳ ಮೇಲೆ ದುರ್ವತನೆ ತೋರಿದ್ದಾರೆ ಎಂದು ಸಿಎಪ್ ಐ ಮುಖಂಡರ ಆರೋಪಿಸಿದ್ದಾರೆ.ವಿದ್ಯಾರ್ಥಿ ನಾಯಕರಾದ ರಾಜ್ಯ ಕಾರ್ಯದರ್ಶಿ ಸಾಧಿಕ್ ಜಾರತ್ತಾರು, ಅಲ್ತಾಫ್ ಹೊಸಪೇಟೆ ಸೇರಿದಂತೆ ರಾಜ್ಯ, ಜಿಲ್ಲಾ ನಾಯಕರನ್ನು ಜಮಖಂಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button