ಉತ್ತರ ಕನ್ನಡಜಿಲ್ಲಾ ಸುದ್ದಿ
ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಪ್ರವಾಸಿಗರು ನೀರು ಪಾಲು

ಕಾರವಾರ : ನೀರಿಗಿಳಿದ ಪ್ರವಾಸಿಗರಿಬ್ಬರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಬೀಚ್ ನಲ್ಲಿ ನಡೆದಿದೆ.
ಸೋಮವಾರ ಸಾಯಂಕಾಲದ ವೇಳೆಗೆ ಹುಬ್ಬಣಗೇರಿ,ಬಾಡ ಬೀಚ್ ನಲ್ಲಿ ದಾವಣಗೆರೆ ಮೂಲದವರಾದ ಯುವತಿ ಮೇಘ.ಎಂ (24) ಹಾಗೂ ಯುವಕ ರೇಣುಕಾ ಪ್ರಸಾದ್ (24) ಎಂಬ ಇಬ್ಬರು ನೀರಿಗಿಳಿದಿದ್ದರು ಎನ್ನಲಾಗಿದೆ. ಈ ವೇಳೆ ನೀರಿನ ಆಳದ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ, ಸಮುದ್ರದಲ್ಲಿ ಮುಂದಕ್ಕೆ ಸಾಗುವ ದುಸ್ಸಾಹಸ ಮಾಡಿದ್ದಾರೆ. ಈ ವೇಳೆ ಆಳದಲ್ಲಿ ಮುಳುಗಿ ಈರ್ವರು ಸಾವನ್ನಪ್ಪಿದ್ದಾರೆ.
ಯುವತಿಯ ಮೃತದೇಹ ಈಗಾಗಲೇ ದೊರೆತಿದ್ದು, ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಈ ವೇಳೆ ಸ್ಥಳದಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ಆನಂದಮೂರ್ತಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ರಕ್ಷಣಾ ಪಡೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು




