ಮಂಡ್ಯ
ಮಂಡ್ಯ: ಸ್ಫೋಟ ಸ್ಥಳದಲ್ಲಿ ಪರಿಶೀಲನೆ

ಮಂಡ್ಯ: ಪಾಂಡವಪುರ ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಸ್ಫೋಟ ಮಾಡಿದ್ದರ ಸ್ಥಳದಲ್ಲಿ ಸ್ಪೋಟಕ ವಸ್ತುಗಳ ಪರಿಶೀಲನೆ ನಡೆಯಿತು. ಏರ್ ಕಂಪ್ರೆಷರ್ ಮೂಲಕ 13 ಗುಳಿಗಳನ್ನು ಪರಿಶೀಲಿಸಲಾಯಿತು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ರೈತ ಪುಟ್ಟರಾಜು ತಮ್ಮ ಜಮೀನಿನಲ್ಲಿ ಕೋಳಿ ಫಾರಂ ಆರಂಭಿಸಲು ಹಿಡಕಲ್ಲುಗಳ ಗುಡ್ಡೆಯನ್ನು ಸ್ಫೋಟಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ರೈತ ಪುಟ್ಟರಾಜುವನ್ನು ಮೇಲುಕೋಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸ್ಫೋಟಗೊಳಿಸಿದ್ದ ಗುಳಿಗಳಲ್ಲಿ ಇದ್ದ ವೈರ್ ಗಳನ್ನು ಹೊರತೆಗೆದಿದ್ದು ಸ್ಪೋಟಕ ವಸ್ತುಗಳು ನಾಶವಾಗಿವೆ. ಯಾವುದೇ ಸ್ಪೋಟಕ ವಸ್ತುಗಳು ಜೀವಂತವಿಲ್ಲ ಎಂದು BDDS ತಂಡ ವರದಿ ನೀಡಿದೆ.




